ವಕ್ಫ್ ಮಂಡಳಿ ಇರುವುದು ಬಡವರಿಗಾಗಿ, ಕಳ್ಳರಿಗೆ ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಲಾಗಿದ್ದು, ಮಸೂದೆ ಮೇಲಿನ ಚರ್ಚೆ ಮೇಲೆ ಮಾತನಾಡಿದ ಅವರು, ವಕ್ಫ್ ಮಂಡಳಿ ವಶದಲ್ಲಿರುವ ದೇವಸ್ಥಾನ ಹಾಗೂ ವಿವಿಧ ಸಮುದಾಯಗಳ ಪೂಜಾ ಮಂದಿರಗಳ ಪಟ್ಟಿ ನೀಡಿದರು.
ನಿಮ್ಮ ಜಾಗ ಮತ್ತೊಬ್ಬರಿಗೆ ಹೇಗೆ ಹೋಗುತ್ತದೆ? ತಮ್ಮ ಆಸ್ತಿಯನ್ನು ಮತ್ತೊಬ್ಬರಿಗೆ ದಾನ ಮಾಡುವುದು ಹೇಗೆ ಸಾಧ್ಯ? ಸರ್ಕಾರದ ಆಸ್ತಿ ಕೂಡ ಹೇಗೆ ಸೇರಲು ಸಾಧ್ಯ? ಹಲವು ಸಮಯಗಳಲ್ಲಿ ಕೊನೆಯ ಗಳಿಗೆಯಲ್ಲಿ ವಾಪಸ್ ಪಡೆಯಲಾಗಿದೆ ಎಂದು ಅಮಿತ್ ಶಾ ವಿವರಿಸಿದರು.
ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಸ್ತಾಪಿಸಿದ ಅಮಿತ್ ಶಾ, 602 ಚದರ ಅಡಿ ಜಾಗವನ್ನು ವಕ್ಫ್ ವಶಕ್ಕೆ ಪಡೆಯುವುದನ್ನು ತಡೆದಿದೆ. ತಮಿಳುನಾಡಿನಲ್ಲಿ 400 ವರ್ಷಗಳ ಪುರಾತನ ದೇವಸ್ಥಾನ ವಕ್ಫ್ ವಶಕ್ಕೆ ಹೋಗಿದೆ. ಅತ್ಯಂತ ದುಬಾರಿ ಜಾಗವನ್ನು 12 ಸಾವಿರಕ್ಕೆ ಬಾಡಿಗೆಗೆ ನೀಡಲಾಗಿದೆ. ಪ್ರಯಾಗ್ ರಾಜ್ ನಲ್ಲಿ ಚಂದ್ರಶೇಖರ್ ಆಜಾದ್ ಸೇರಿದಂತೆ ಹಲವು ಸಮುದಾಯದ ಜಾಗಗಳನ್ನು ವಕ್ಫ್ ಮಂಡಳಿ ವಶದಲ್ಲಿದೆ ಎಂದು ಅವರು ವಿವರಿಸಿದರು.



