Sunday, June 7, 2026
Google search engine
Homeದೇಶತ್ಯಾಗ ಮಾಡಿ ದೇಶಭಕ್ತಿ ಪ್ರದರ್ಶಿಸಿ: ಜನತೆಗೆ ಮೋದಿ ಕರೆ

ತ್ಯಾಗ ಮಾಡಿ ದೇಶಭಕ್ತಿ ಪ್ರದರ್ಶಿಸಿ: ಜನತೆಗೆ ಮೋದಿ ಕರೆ

ಹೈದರಾಬಾದ್: ಸತತವಾಗಿ ಏರುತ್ತಿರುವ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನರು ತ್ಯಾಗ ಮಾಡಿ ದೇಶಭಕ್ತಿ ಪ್ರದರ್ಶಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಹೈದರಾಬಾದ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೈಲ ಹಾಗೂ ಎಲ್ ಪಿಜಿ ದರಗಳು ಏರಿಕೆಯಾಗುತ್ತಿವೆ. ಇದರಿಂದ ಪಾರಾಗಲು ಮಿತ ಬಳಕೆ ಮಾಡಬೇಕು ಎಂದರು.

ವಿದೇಶ ಪ್ರಯಾಣ ಕಡಿತ ಮಾಡಬೇಕು. ಸಾರ್ವಜನಿಕ ವಾಹನಗಳಾದ ಬಸ್, ಮೆಟ್ರೊ, ರೈಲುಗಳನ್ನು ಬಳಸಬೇಕು. ಪೆಟ್ರೋಲ್-ಡೀಸೆಲ್ ವಾಹನ ಬಳಕೆ ಕಡಿಮೆ ಮಾಡಿ, ಎಲೆಕ್ಟ್ರಿಕ್ ವಾಹನ ಹೆಚ್ಚು ಬಳಸಬೇಕು ಎಂದು ಅವರು ಸಲಹೆ ನೀಡಿದರು.

ಗಡಿಯಲ್ಲಿ ಕಾವಲು ಕಾಯುವುದು ಮಾತ್ರ ದೇಶಕ್ಕೆ ಮಾಡಿದ ತ್ಯಾಗ ಅಲ್ಲ. ನಿತ್ಯ ಜೀವನದಲ್ಲಿ ಮಿತವ್ಯಯ ಮಾಡಿ ಉಳಿತಾಯ ಮಾಡಿ ದೇಶವನ್ನು ಆರ್ಥಿಕ ಹೊಡೆತದಿಂದ ಕಾಪಾಡುವುದು ಕೂಡ ಹೊಣೆಗಾರಿಕೆ ಮತ್ತು ದೇಶಭಕ್ತಿಯಾಗಿದೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments