Wednesday, May 13, 2026
Google search engine
Homeರಾಜ್ಯ4 ಡಿವೈಎಸ್‌ಪಿ 293 ಇನ್ಸ್‌ಪೆಕ್ಟ‌ರ್ ವರ್ಗಾವಣೆ

4 ಡಿವೈಎಸ್‌ಪಿ 293 ಇನ್ಸ್‌ಪೆಕ್ಟ‌ರ್ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಮೇಜರ್ ಮಾಡಿ ಭಾರೀ  ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದೆ. ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್‌ಪಿ ದರ್ಜೆಯ ಅಧಿಕಾರಿಗಳ ವರ್ಗಾವಣೆಯನ್ನು ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ಒಟ್ಟು 293 ಪೊಲೀಸ್‌ ಇನ್ಸ್‌ಪೆಕ್ಟ‌ರ್ (ಸಿವಿಲ್) ಹಾಗೂ 74 ಡಿವೈಎಸ್‌ಪಿ (ಸಿವಿಲ್‌) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಪೊಲೀಸ್ ಸಿಬ್ಬಂದಿ ಮಂಡಳಿಯ  ತೀರ್ಮಾನದಂತೆ ಈ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸೇವೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಡಿಜಿ ಮತ್ತು ಐಜಿಪಿ ಕಚೇರಿ ಮೂಲಗಳು ತಿಳಿಸಿವೆ.

293 ಇನ್ಸ್‌ಪೆಕ್ಟರ್‌ಗಳ ಅದಲು-ಬದಲು

ವರ್ಗಾವಣೆಗೊಂಡ 293 ಇನ್ಸ್‌ಪೆಕ್ಟರ್‌ಗಳಲ್ಲಿ ಹೆಚ್ಚಿನವರು ಬೆಂಗಳೂರು ನಗರ, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡದಂತಹ ಪ್ರಮುಖ ನಗರ ಪ್ರದೇಶಗಳ ವಿವಿಧ ಠಾಣೆಗಳಿಗೆ ನಿಯುಕ್ತಿಗೊಂಡಿದ್ದಾರೆ.

ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ ಮತ್ತು ವಿಶೇಷ ತನಿಖಾ ತಂಡಗಳಿಂದ (ಎಸ್ ಐಟಿ) ಹಲವು ಅಧಿಕಾರಿಗಳನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ತರಲಾಗಿದ್ದರೆ, ಕೆಲವು ಅನುಭವಿ ಅಧಿಕಾರಿಗಳನ್ನು ಕ್ರೈಂ ಬ್ರಾಂಚ್ ಮತ್ತು ಗುಪ್ತಚರ ವಿಭಾಗಗಳಿಗೆ ನಿಯೋಜಿಸಲಾಗಿದೆ. ಪ್ರಮುಖವಾಗಿ ಸೂರ್ಯನಗರ, ಮಡಿವಾಳ, ಚಂದ್ರಾ ಲೇಔಟ್‌ನಂತಹ ಪ್ರಮುಖ ಠಾಣೆಗಳ ಇನ್ಸ್‌ಪೆಕ್ಟರ್‌ಗಳನ್ನು ಬದಲಾವಣೆ ಮಾಡಲಾಗಿದೆ.

ಡಿವೈಎಸ್‌ಪಿಗಳ ವರ್ಗಾವಣೆ:

ಇನ್ಸ್‌ಪೆಕ್ಟರ್‌ಗಳ ಜೊತೆಗೆ 74 ಡಿವೈಎಸ್‌ಪಿ  ದರ್ಜೆಯ ಅಧಿಕಾರಿಗಳಿಗೂ ಹೊಸ ಸ್ಥಳಗಳನ್ನು ನಿಯುಕ್ತಿಗೊಳಿಸಲಾಗಿದೆ. ಉಪವಿಭಾಗಗಳ ಎಸಿಪಿ  ಮತ್ತು ಡಿವೈಎಸ್‌ಪಿ ಹುದ್ದೆಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ.

ಬೆಂಗಳೂರು ನಗರದ ಸಂಚಾರ ವಿಭಾಗ, ವಿಶೇಷ ಜಾರಿ ಕೋಶ ಮತ್ತು ಜಿಲ್ಲಾ ಪೊಲೀಸ್‌ ಉಪವಿಭಾಗಗಳಲ್ಲಿ ಹೊಸ ಅಧಿಕಾರಿಗಳು ಅಧಿಕಾರವಹಿಸಿಕೊಳ್ಳಲಿದ್ದಾರೆ.

ತಕ್ಷಣದಿಂದ ಜಾರಿಗೆ ಆದೇಶ:

ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹಳೆಯ ಹುದ್ದೆಗಳಿಂದ ಬಿಡುಗಡೆಗೊಂಡು, ನಿಯೋಜಿತ ಹೊಸ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ  ಹಲವು ಅಧಿಕಾರಿಗಳಿಗೆ ಈ ಆದೇಶದ ಮೂಲಕ ಸಕ್ರಿಯ ಹುದ್ದೆಗಳನ್ನು ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments