Thursday, May 14, 2026
Google search engine
Homeಜಿಲ್ಲಾ ಸುದ್ದಿಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ

ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ

ಸಕಲೇಶಪುರ ತಾಲೂಕಿನ ಮೂಗಲಿಯಲ್ಲಿ ಬೆಳ್ಳಂಬೆಳಗ್ಗೆ ಸ್ನೇಹಿತೆ ಜೊತೆ ನಡೆದು ಹೋಗುತ್ತಿದ್ದ ಮಹಿಳೆಯನ್ನು ಕಾಡಾನೆ ಬಲಿ ಪಡೆದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ಮೂಗಲಿ ಗ್ರಾಮದ 40 ವರ್ಷದ ಶೋಭಾ ಆನೆ  ದಾಳಿಗೆ ಮೃತ ಪಟ್ಟ ಮಹಿಳೆ. ಬೆಳಗ್ಗೆ ತೋಟಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ದಾಳಿ ಮಾಡಿದ ಆನೆಯ ತುಳಿತಕ್ಕೆ ಆಕೆ ಬಲಿಯಾಗಿದ್ದಾರೆ.

ಈಚೆಗೆ ಕೊಡಗಿನಿಂದ ಬಂದಿರುವ ಆಕ್ರಮಣಕಾರಿಯಾಗಿ ವರ್ತಿಸುವ ದೈತ್ಯ ಆನೆ ಮೊದಲ ಬಲಿ ಪಡೆದಿದೆ. ಮೃತ ಮಹಿಳೆ ಶೋಭಾ ಒಂದೂವರೆ ಎಕರೆ ಕಾಫಿ ತೋಟವನ್ನು ಹೊಂದಿದ್ದು ಅವರ ತಾಯಿ ರಾಜಮ್ಮ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆನೆ ದಾಳಿ ಮಾಡಿದೆ.

ರಾಜಮ್ಮ ಓಡಿ ಬಚಾವಾಗಿದ್ದು ಶೋಭಾ ಅವರು ಆನೆಯ ತುಳಿತಕ್ಕೆ ಸಿಲುಕಿದ್ದಾರೆ. ರಾಜಮ್ಮ ಅವರು ಬೆಳಗೋಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸರ್ಕಾರ ಹಣದ ಪರಿಹಾರ ನೀಡುತ್ತಿದೆಯೇ ಹೊರತು ಆನೆ ಮಾನವ ಸಂಘರ್ಷಕ್ಕೆ ಸೂಕ್ತ ಪರಿಹಾರ ದೂರದ ಮಾತು. ಹಾಗಾದರೆ ಮನುಷ್ಯನ ಜೀವಕ್ಕೆ ಏನು ಪರಿಹಾರ ಇಲ್ಲವೇ ಪರಿಹಾರ ನ್ಯಾಯ ಕೇಳಲು  ಸಂಘಟನೆಗಳು ಹೊರಟರೆ ಅವರನ್ನೇ ಜೈಲಿಗೆ ಹಾಕಿ ಕೇಸ್ ರಿಜಿಸ್ಟರ್ ಮಾಡ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments