Tuesday, May 26, 2026
Google search engine
Homeದೇಶಆಯುಷ್ಮಾನ್‌ ಯೋಜನೆಯ 1.40 ಲಕ್ಷ ಕೋಟಿ ರೂ. ಬಿಲ್‌ ಬಾಕಿ ಉಳಿಸಿಕೊಂಡ ಕೇಂದ್ರ: ಐಎಂಎ ಕಳವಳ

ಆಯುಷ್ಮಾನ್‌ ಯೋಜನೆಯ 1.40 ಲಕ್ಷ ಕೋಟಿ ರೂ. ಬಿಲ್‌ ಬಾಕಿ ಉಳಿಸಿಕೊಂಡ ಕೇಂದ್ರ: ಐಎಂಎ ಕಳವಳ

ನವದೆಹಲಿ: ಆಯುಷ್ಮಾನ್‌ ಯೋಜನೆಯಡಿ ದೇಶಾದ್ಯಂತ 94 ಲಕ್ಷ ಆಸ್ಪತ್ರೆಗಳಿಗೆ 1.40 ಲಕ್ಷ ಕೋಟಿ ರೂ. ಬಿಲ್‌ ಪಾವತಿ ಬಾಕಿ ಉಳಿದಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಒಪ್ಪಿಕೊಂಡಿದೆ.

ಪ್ರಧಾನಿ ನರೇಂದ್ರ ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಆಯುಷ್ಮಾನ್‌ ಯೋಜನೆಯಡಿ ಚಿಕಿತ್ಸೆ ಪಡೆದವರ ಬಿಲ್‌ ಗಳನ್ನು ಆಸ್ಪತ್ರೆಗಳಿಗೆ ಬಿಡುಗಡೆ ಮಾಡದೇ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ.

ದೇಶದ ಶೇ.40ರಷ್ಟು ಬಡ ವರ್ಗದವರು ಅಂದರೆ ಸುಮಾರು 55 ಕೋಟಿ ಜನರು ಆಯುಷ್ಮಾನ್‌ ಯೋಜನೆ ವ್ಯಾಪ್ತಿಗೆ ಬರುತ್ತಾರೆ. ಈ ಯೋಜನೆಯಡಿ ಪ್ರತಿಯೊಬ್ಬ ನಾಗರಿಕರಿಗೆ ಗರಿಷ್ಠ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತದೆ.

ಆಯುಷ್ಮಾನ್‌ ಯೋಜನೆಯಡಿ ದೇಶದಲ್ಲಿ ಇದುವರೆಗೆ 41 ಕೋಟಿಗೂ ಅಧಿಕ ನಾಗರಿಕರಿಗೆ ಆಯುಷ್ಮಾನ್‌ ಕಾರ್ಡ್‌ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು 33 ಕೋಟಿ ಜನರು ನೋಂದಣಿ ಮಾಡಿಕೊಂಡಿದ್ದರೆ, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಬಿಹಾರ ಮತ್ತು ಒಡಿಶಾ ಇವೆ.

ಲಕ್ಷದ್ವೀಪವು 36,000ಕ್ಕೂ ಹೆಚ್ಚು ಖಾಸಗಿ ಸೌಲಭ್ಯಗಳನ್ನು ಹೊಂದಿರುವ 31,466 ಆಸ್ಪತ್ರೆಗಳ ಮೂಲಕ ಈ ಯೋಜನೆ ಕಾರ್ಯನಿರ್ವಹಿಸುತ್ತದೆ, ಟ್ರಸ್ಟ್, ವಿಮೆ ಅಥವಾ ಹೈಬ್ರಿಡ್ ಮಾದರಿಗಳ ಅಡಿಯಲ್ಲಿ ರಾಜ್ಯಗಳ ಪಾಲುದಾರಿಕೆಯೊಂದಿಗೆ ಈ ಯೋಜನೆ ಇದ್ದರೂ ಆಸ್ಪತ್ರೆಗಳಿಗೆ ಸೂಕ್ತ ಸಮಯದಲ್ಲಿ ಹಣ ಬಿಡುಗಡೆ ಮಾಡದೇ ಕೇಂದ್ರ ಬಾಕಿ ಉಳಿಸಿಕೊಂಡಿರುವುದಕ್ಕೆ ಭಾರತೀಯ ವೈದ್ಯಕೀಯ ಸಂಘ (IMA) ಕಳವಳ ವ್ಯಕ್ತಪಡಿಸಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ (NHA) ಪತ್ರ ಬರೆದಿದೆ.

ಕೇಂದ್ರದಿಂದ ಆಸ್ಪತ್ರೆಗಳಿಗೆ ಆಯುಷ್ಮಾನ್‌ ಯೋಜನೆಯ ಹಣ ಬಿಡುಗಡೆ ಆಗದ ಕಾರಣ ಹಲವಾರು ಪ್ರಮುಖ ಆಸ್ಪತ್ರೆಗಳು ಸಂಕಷ್ಟಕ್ಕೆ ಸಿಲುಕಿವೆ. ಪ್ರಧಾನಿ ತವರೂರಾದ ಗುಜರಾತ್‌ ನಲ್ಲಿಯೇ 2021ರಿಂದ 2023ರ ಅವಧಿಯಲ್ಲಿ 300 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ.

ವಿಳಂಬವಾದ ಪಾವತಿಗಳು, ಕಡಿಮೆ ಮರುಪಾವತಿ ದರಗಳು ಮತ್ತು ಆಸ್ಪತ್ರೆಯ ಹಣಕಾಸುಗಳಿಗೆ ಬೆದರಿಕೆ ಹಾಕುವ ಸಂಕೀರ್ಣವಾದ ಕ್ಲೈಮ್ ಪ್ರಕ್ರಿಯೆಗಳಂತಹ ಸಮಸ್ಯೆಗಳನ್ನು ಅವರು ಎತ್ತಿ ತೋರಿಸಿದರು.

ನಿಯಮದ ಪ್ರಕಾರ ಆಯುಷ್ಮಾನ್‌ ಕಾರ್ಡ್‌ ಹೊಂದಿರುವ ರೋಗಿಯ ಚಿಕಿತ್ಸೆ ನಡೆದ 15 ದಿನಗಳಲ್ಲಿ ಹಣ ಬಿಡುಗಡೆ ಆಗಬೇಕಿದೆ. ಆದರೆ ಈ ರೀತಿ ನಿಗದಿತ ಅವಧಿಯೊಳಗೆ ಹಣ ಪಾವತಿ ಆಗಿರುವ ಪ್ರಮಾಣ ಕೇವಲ ಶೇ.೫ರಷ್ಟು ಮಾತ್ರ ಆಗಿದೆ. ಅತ್ಯಂತ ಚಿಕ್ಕ ರಾಜ್ಯವಾದ ಕೇರಳಕ್ಕೆ ೪ ಕೋಟಿ ರೂ. ಬಾಕಿ ಇದ್ದರೆ, ದೇಶಾದ್ಯಂತ ೬೪ ಲಕ್ಷ ಪ್ರಕರಣ ಸೇರಿದಂತೆ 1.21 ಲಕ್ಷ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂಬುದು ಆರ್‌ ಟಿಐ ನಲ್ಲಿ ಬೆಳಕಿಗೆ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments