ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನಗೊಂಡು ಹೋಳಾದ ನಂತರ ಬೆಂಕಿ ಹೊತ್ತಿಕೊಂಡು ಉರಿದು ಹೋಗಿದ್ದು, ಪೈಲೆಟ್ ಗಾಯಗೊಂಡ ಘಟನೆ ಗುಜರಾತ್ ನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಬುಧವಾರ ರಾತ್ರಿ 9.30ರ ಸುಮಾರಿಗೆ ಜಾಮ್ ನಗರದಲ್ಲಿ ವಾಯುಪಡೆಯ ಜಾಗ್ವರ್ ವಿಮಾನ ಪತನಗೊಂಡಿದೆ. ಒಬ್ಬ ಪೈಲೆಟ್ ಗಾಯಗೊಂಡಿದ್ದರೆ ಮತ್ತೊಬ್ಬ ನಾಪತ್ತೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಭದ್ರತಾ ಸಿಬ್ಬಂದಿ ದೌಡಾಯಿಸಿದ್ದಾರೆ. ಯುದ್ಧ ವಿಮಾನ ಪತಗೊಂಡಾಗ ಪೈಲೆಟ್ ನೆಲದ ಮೇಲೆ ಗಾಯಗೊಂಡು ಉರುಳಿಬಿದ್ದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಸ್ಥಳೀಯರಿಗೆ ಯಾವುದೇ ಹಾನಿ ಆಗಿಲ್ಲ.
ಕಳೆದ ತಿಂಗಳು ಜಾಗ್ವರ್ ಯುದ್ಧ ವಿಮಾನ ಹರಿಯಾಣದಲ್ಲಿ ಪತನಗೊಂಡ ಘಟನೆ ನಂತರ ನಡೆದ ಎರಡನೇ ದುರ್ಘಟನೆ ಇದಾಗಿದೆ.



