ಪ್ರಬಲ ಭೂಕಂಪನದಿಂದ ತತ್ತರಿಸಿದ ಮ್ಯಾನ್ಮರ್ ನಲ್ಲಿ ಸಾವಿನ ಸಂಖ್ಯೆ 3000ಕ್ಕೇರಿದ್ದು, ಇದರ ಬೆನ್ನಲ್ಲೇ ಬುಧವಾರ ಮತ್ತೆ 5.6 ತೀವ್ರತೆಯ ಭೂಕಂಪನ ಸಂಭವಿಸಿದೆ.
ಕಳೆದ ವಾರ ಶುಕ್ರವಾರ ಸಂಭವಿಸಿದ 7.7 ಮತ್ತು 6.8 ತೀವ್ರತೆಯ ಭೂಕಂಪನದಿಂದ ಮ್ಯಾನ್ಮರ್ ಮತ್ತು ಬ್ಯಾಂಕಾಕ್ ತತ್ತರಿಸಿತ್ತು. ದುರಂತ ಸಂಭವಿಸಿದ ವಾರದಲ್ಲಿ ಸಾವಿನ ಸಂಖ್ಯೆ 3000 ದಾಟಿದೆ. ಗಾಯಗೊಂಡವರ ಸಂಖ್ಯೆ 4700ಕ್ಕೆ ಜಿಗಿದಿದೆ.
ಬುಧವಾರ ಮತ್ತೆ ಭೂಕಂಪನ ಸಂಭವಿಸಿದೆ. 30 ಲಕ್ಷ ಜನರು ಮನೆ-ಮಠ ಕಳೆದುಕೊಂಡಿದ್ದರೆ, 20 ಲಕ್ಷಕ್ಕೂ ಅಧಿಕ ಜನರಿಗೆ ಚಿಕಿತ್ಸೆಯ ನೆರವು ಬೇಕಾಗಿದೆ. ಮ್ಯಾನ್ಮರ್ ನಲ್ಲಿ ನಾಗರಿಕ ಧಂಗೆ ನಡೆಯುತ್ತಿದ್ದು, ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿದೆ.



