Thursday, 29 October 2026 — Kannadavahini
BREAKING NEWS
Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್
ಬೆಂಗಳೂರು

ಮನೆ ಮಾಲೀಕರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್: 10 ತಿಂಗಳು ಮನೆ ಬಾಡಿಗೆ ಮುಂಗಡ ಪಡೆಯುವಂತಿಲ್ಲ!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 2 ವೀಕ್ಷಣೆಗಳು
house rent

ಬಾಡಿಗೆಗೆ ಮನೆ ಕೊಡುವಾಗ ಸೇಫ್ಟಿ ಡೆಪಾಸಿಟ್ (Home rental advance) ಆಗಿ 10 ತಿಂಗಳ ಬಾಡಿಗೆ ಮೊತ್ತವನ್ನು ಅಡ್ವಾನ್ಸ್ ಆಗಿ ಪಡೆಯುವಂತಿಲ್ಲ ಎಂದು ರಾಜ್ಯ ಸರ್ಕಾರ ಹೊಸ ಗೃಹ ಬಾಡಿಗೆ ನಿಯಮಗಳನ್ನು ಜಾರಿ ಮಾಡಿದೆ.

ಹೊಸ ಗೃಹ ಬಾಡಿಗೆ ನಿಯಮಗಳ ಪ್ರಕಾರ ಮನೆ ಮಾಲೀಕರು ಮುಂಗಡವಾಗಿ 10 ತಿಂಗಳು ಬಾಡಿಗೆ ಹಣವನ್ನು ಠೇವಣಿಯಾಗಿ ಪಡೆಯಬಾರದು. ಒಂದು ವೇಳೆ ಮುಂಗಡವಾಗಿ ಎರಡು ತಿಂಗಳು ಬಾಡಿಗೆ ಹಣವನ್ನು ಮಾತ್ರ ಮುಂಗಡವಾಗಿ ಪಡೆಯಬಹುದು ಎಂದು ಸೂಚಿಸಿದೆ.

ಬೆಂಗಳೂರಿನಲ್ಲಿ 10 ತಿಂಗಳು ಮುಂಗಡವಾಗಿ ಬಾಡಿಗೆ ಹಣವನ್ನು ಠೇವಣಿಯಾಗಿ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಮಾಲೀಕರ ಇಚ್ಛೆಗೆ ತಕ್ಕಂತೆ ದಿಢೀರನೇ ಬಾಡಿಗೆ ಹೆಚ್ಚಿಸುವುದು ಇತ್ಯಾದಿ ಆಗುತ್ತಲೇ ಇರುತ್ತದೆ. ಅಡ್ವಾನ್ಸ್ ಅತಿಯಾಯಿತು, ಮಾಲೀಕರ ಕಿರಿಕಿರಿ ಹೆಚ್ಚಾಯಿತು ಎಂಬ ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ಗೃಹ ಬಾಡಿಗೆ ನಿಯಮಗಳನ್ನು ಪರಿಷ್ಕರಣೆ ಮಾಡಿ ಆದೇಶಿಸಲಾಗಿದೆ.

ಸೆಕ್ಯೂರಿಟಿ ಡೆಪಾಸಿಟ್​ಗಳು ಎರಡು ತಿಂಗಳ ಬಾಡಿಗೆಗೆ ಸೀಮಿತ

ಬಾಡಿಗೆಗೆ ಸೆಕ್ಯೂರಿಟಿ ಡೆಪಾಸಿಟ್ ಆಗಿ 10 ತಿಂಗಳ ಬಾಡಿಗೆ ಹಣವನ್ನು ಅಡ್ವಾನ್ಸ್ ಆಗಿ ಪಡೆಯುವಂತಿಲ್ಲ. ಎರಡು ತಿಂಗಳ ಬಾಡಿಗೆಯ ಹಣವನ್ನು ಮಾತ್ರ ಮುಂಗಡವಾಗಿ ಪಡೆಯಬಹುದು ಎಂದು ಹೊಸ ನಿಯಮಗಳು ಹೇಳುತ್ತವೆ.

ಬಾಡಿಗೆ ಕರಾರುಗಳ ನೊಂದಣಿ

ಬಾಡಿಗೆಗೆ ಮನೆ ಕೊಟ್ಟಾಗ ಕರಾರು ಮಾಡಿಕೊಳ್ಳಬೇಕು. ಈ ರೆಂಟಲ್ ಅಗ್ರೀಮೆಂಟ್ ಅನ್ನು ಅಧಿಕೃತವಾಗಿ ನೊಂದಾಯಿಸಬೇಕು. ನೊಂದಣಿ ಕಚೇರಿಯಲ್ಲಿ ಬೇಕಾದರೆ ಮಾಡಬಹದು, ಆನ್​ಲೈನ್​ನಲ್ಲೇ ಮಾಡಬಹುದು. ಅಗ್ರೀಮೆಂಟ್ ಅನ್ನು ರಿಜಿಸ್ಟರ್ ಮಾಡದಿದ್ದರೆ 5,000 ರೂ ದಂಡ ತೆರಬೇಕಾಗುತ್ತದೆ.

ರೆಂಟಲ್ ಅಗ್ರೀಮೆಂಟ್​ನಲ್ಲಿ ಏನಿರಬೇಕು, ಏನಿರಬಾರದು ಎಂಬುದನ್ನು ಸರ್ಕಾರವೇ ತಿಳಿಸಿದೆ. ಒಂದು ಸ್ಟ್ಯಾಂಡರ್ಡ್ ಟೆಂಪ್ಲೇಟ್ ಕೊಟ್ಟಿದೆ. ಅದರ ಪ್ರಕಾರ ಅಗ್ರೀಮೆಂಟ್ ಇರಬೇಕು. ಹೊಸದನ್ನು ಸೇರಿಸುವುದಾಗಲೀ, ಅಲ್ಲಿರುವುದನ್ನು ತೆಗೆಯುವುದಾಗಲೀ ಆಗಬಾರದು.

ಬಾಡಿಗೆ ಹೆಚ್ಚಳಕ್ಕೆ 3 ತಿಂಗಳ ಮುಂಚಿತ ನೋಟೀಸ್

ಮಾಲೀಕರು ಬಾಡಿಗೆಯ ಹಣವನ್ನು ದಿಢೀರನೇ ಹೆಚ್ಚಿಸುವಂತಿಲ್ಲ. ಮುಂದಿನ ತಿಂಗಳಿಂದಲೇ ಹೆಚ್ಚು ಬಾಡಿಗೆ ಕೊಡಿ ಎಂದು ಡಿಮ್ಯಾಂಡ್ ಮಾಡುವಂತಿಲ್ಲ. ಬಾಡಿಗೆ ಹೆಚ್ಚಿಸುವುದಿದ್ದರೆ 3 ತಿಂಗಳು ಮುಂಚಿತವಾಗಿ ತಿಳಿಸಬೇಕು ಎಂದು ಹೊಸ ರೆಂಟ್ ರೂಲ್ಸ್ ಹೇಳುತ್ತವೆ. ಒಂದು ವರ್ಷದಲ್ಲಿ ಒಮ್ಮೆ ಮಾತ್ರವೇ ಬಾಡಿಗೆ ಹೆಚ್ಚಿಸಲು ಅವಕಾಶ ಇರುತ್ತದೆ.

ಆನ್​ಲೈನ್​ನಲ್ಲಿ ಬಾಡಿಗೆ ಪಾವತಿ

ಮನೆ ಬಾಡಿಗೆ ತಿಂಗಳಿಗೆ 5,000 ರೂಗಿಂತ ಹೆಚ್ಚಿದ್ದರೆ ಅದನ್ನು ಕ್ಯಾಷ್ ಬದಲು ಯುಪಿಐ ಇತ್ಯಾದಿ ಆನ್​ಲೈನ್ ಪ್ಲಾಟ್​ಫಾರ್ಮ್​ನಲ್ಲಿ ಪಾವತಿಸಬೇಕು. ತಿಂಗಳಿಗೆ ಮನೆ ಬಾಡಿಗೆ 50,000 ರೂಗಿಂತ ಹೆಚ್ಚಿದ್ದರೆ ಟಿಡಿಎಸ್ ಕಡಿತ ಆಗುತ್ತದೆ.

ಬಾಡಿಗೆ ವ್ಯಾಜ್ಯಕ್ಕೆ ಈಗ ಬೇಗ ಪರಿಹಾರ

ಮನೆ ಬಾಡಿಗೆ ಸಂಬಂಧಿಸಿದ ವ್ಯಾಜ್ಯವನ್ನು ಶೀಘ್ರ ಇತ್ಯರ್ಥಪಡಿಸಲು ಸರ್ಕಾರ ವಿಶೇಷ ರೆಂಟ್ ಕೋರ್ಟ್​ಗಳು ಹಾಗೂ ಟ್ರಿಬ್ಯುನಲ್​ಗಳನ್ನು ನಿಯೋಜಿಸಿದೆ. ಇಲ್ಲಿ ಬಾಡಿಗೆ ವ್ಯಾಜ್ಯ ಪ್ರಕರಣವನ್ನು 60 ದಿನದೊಳಗೆ ಇತ್ಯರ್ಥಪಡಿಸಲಾಗುತ್ತದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8392 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment