Thursday, May 14, 2026
Google search engine
Homeದೇಶಭೂಕುಸಿತ ಮಣ್ಣಿನಲ್ಲಿ ಹುದುಗಿಹೋದ ಬಸ್:‌ ಕನಿಷ್ಠ 18 ಮಂದಿ ದುರ್ಮರಣ

ಭೂಕುಸಿತ ಮಣ್ಣಿನಲ್ಲಿ ಹುದುಗಿಹೋದ ಬಸ್:‌ ಕನಿಷ್ಠ 18 ಮಂದಿ ದುರ್ಮರಣ

ಭೂಕುಸಿತದಿಂದ ಕುಸಿದ ಮಣ್ಣಿನಡಿ ಖಾಸಗಿ ಬಸ್‌ ಹುದುಗಿ ಹೋದ ಪರಿಣಾಮ ಕನಿಷ್ಠ 18 ಮಂದಿ ಮೃತಪಟ್ಟ ದಾರುಣ ಘಟನೆ ಹಿಮಾಚಲ ಪ್ರದೇಶದ ಬಿಲಾಸಪುರ್‌ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಹರಿಯಾಣದ ರೋಹ್ಟಕ್‌ ನಿಂದ ಹೊರಟ್ಟಿದ್ದ ಬಸ್‌ ಬಿಲಾಸಪುರದಿಂದ ಗುಮ್ರಾಹವಿನ್‌ ಬಸ್‌ ಪ್ರಯಾಣಿಸುತ್ತಿದ್ದಾಗ ಭಾರೀ ಮಳೆಯಿಂದ ಇಡೀ ಬೆಟ್ಟವೇ ಕುಸಿದು ಬಸ್‌ ಮೇಲೆ ಬಿದ್ದಿದೆ. ದುರ್ಘಟನೆ ಸಂಭವಿಸುವಾಗ ಬಸ್‌ ನಲ್ಲಿ ಕನಿಷ್ಠ 30ರಿಂದ 35 ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದೆ.

ಜನ್‌ ದತ್ತ ಲೋಕಸಭಾ ಕ್ಷೇತ್ರದ ಬಳಿ ಬಲುಘಾಟ್‌ ಪ್ರದೇಶದ ಬಳಿ ಬಲ್ಲು ಸೇತುವೆ ಬಳಿ ಸಂಚರಿಸುತ್ತಿದ್ದ ಬಸ್‌ ಮೇಲೆ ಮಣ್ಣು ಕುಸಿದು ಬಿದ್ದಿದೆ. ಇಡೀ ಬಸ್‌ ಮಣ್ಣಿನಡಿ ಹುದುಗಿ ಹೋಗಿದ್ದು, ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ 18 ಶವಗಳನ್ನು ಹೊರಗೆ ತೆಗೆದಿದ್ದಾರೆ.

ಮುಖ್ಯಮಂತ್ರಿ ಸುಕ್ವಿಂದರ್‌ ಸಿಂಗ್‌ ಸುಕು ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ತುರ್ತು ರಕ್ಷಣಾ ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಕೂಡಲೇ 10 ಮಂದಿ ಅಸುನೀಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments