Thursday, May 14, 2026
Google search engine
Homeದೇಶಗುಂಡು ಹಾರಿಸಿಕೊಂಡು ಐಪಿಎಸ್ ಅಧಿಕಾರಿ ಆತ್ಮಹತ್ಯೆ

ಗುಂಡು ಹಾರಿಸಿಕೊಂಡು ಐಪಿಎಸ್ ಅಧಿಕಾರಿ ಆತ್ಮಹತ್ಯೆ

ಐಪಿಎಸ್ ಅಧಿಕಾರಿ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಂಡೀಘಡದಲ್ಲಿ ನಡೆದಿದೆ.

2001ರ ಐಪಿಎಸ್ ಬ್ಯಾಚ್ ಆಗಿರುವ ಹರಿಯಾಣದ ಐಪಿಎಸ್ ಅಧಿಕಾರಿ ಆಗಿರುವ ಪೂರನ್ ಕುಮಾರ್ ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಪೂರನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಾಗ ಐಎಎಸ್ ಅಧಿಕಾರಿ ಆಗಿರುವ ಪತ್ನಿಅಮನ್ ಪಿ ಕುಮಾರ್ ಜಪಾನ್ ಪ್ರವಾಸದಲ್ಲಿದ್ದು, ಮನೆಯಲ್ಲಿ ಯಾರೂ ಇರಲಿಲ್ಲ. ಬುಧವಾರ ಭಾರತಕ್ಕೆ ಮರಳಲಿದ್ದಾರೆ.

ಸೆಕ್ಟರ್ 11ರ ಪೊಲೀಸರಿಗೆ ಮಧ್ಯಾಹ್ನ ಸಾವಿನ ಮಾಹಿತಿ ಬಂದಿದ್ದು, ಸ್ಥಳಕ್ಕೆ ಎಫ್ ಎಸ್ ಎಲ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಡೆತ್ ನೋಟ್ ಪತ್ತೆಯಾಗಿರುವ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ಪೊಲೀಸ್ ಇಲಾಖೆಯಲ್ಲಿ ಎರಡನೇ ಅತೀ ಉನ್ನತ ಹುದ್ದೆ ಆಗಿರುವ ಎಡಿಜಿಪಿ ಆಗಿದ್ದ ಪೂರನ್ ಕುಮಾರ್, ಸೆಪ್ಟೆಂಬರ್ 29ರಂದು ರೋಹ್ಟಕ್ ನಲ್ಲಿರುವ ಪೊಲೀಸ್ ತರಬೇತಿ ಕೇಂದ್ರಕ್ಕೆ ನಿಯೋಜನೆ ಆಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments