Friday, August 14, 2026
Google search engine
Homeದೇಶಹಿಂದೂಗೆ ಮತಾಂತರಗೊಂಡು 12ನೇ ತರಗತಿ ವಿದ್ಯಾರ್ಥಿ ಮದುವೆ ಆದ 3 ಮಕ್ಕಳ ತಾಯಿ!

ಹಿಂದೂಗೆ ಮತಾಂತರಗೊಂಡು 12ನೇ ತರಗತಿ ವಿದ್ಯಾರ್ಥಿ ಮದುವೆ ಆದ 3 ಮಕ್ಕಳ ತಾಯಿ!

ಹಿಂದೂಗೆ ಮತಾಂತರಗೊಂಡು 12ನೇ ತರಗತಿ ವಿದ್ಯಾರ್ಥಿಯನ್ನು ಮೂರು ಮಕ್ಕಳ ತಾಯಿ ದೇವಸ್ಥಾನದಲ್ಲಿ ಮದುವೆ ಆಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಅಮ್ರೊಹಾ ಜಿಲ್ಲೆಯಲ್ಲಿ ನಡೆದಿದೆ.

ಹಸನಾಪುರ್ ಸರ್ಕಲ್ ಪೊಲೀಸ್ ಇನ್ ಸ್ಪೆಕ್ಟರ್ ಈ ವಿಷಯವನ್ನು ದೃಢಪಡಿಸಿದ್ದು, ಶಬನಂ ಎಂಬ 30 ವರ್ಷದ ಮಹಿಳೆ ಹಿಂದೂತ್ವಕ್ಕೆ ಮತಾಂತಗೊಂಡು ಶಿವಾನಿ ಆಗಿ ಬದಲಾಗಿದ್ದಾರೆ. ಈಕೆಗೆ ಪೋಷಕರು ಇಲ್ಲ. ಅಲ್ಲದೇ ಹಿಂದೆ ಎರಡು ಮದುವೆ ಆಗಿದ್ದರು ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಯಾವುದೇ ಬಲವಂತರದ ಮತಾಂತರ ಮಾಡುವಂತಿಲ್ಲ. ಒಂದು ವೇಳೆ ಈ ರೀತಿ ಮಾಡಿದರೆ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ.

ಪೊಲೀಸರು ಮದುವೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಾನಿ ಈ ಹಿಂದೆ ಮೀರತ್ ನಲ್ಲಿ ಮದುವೆ ಆಗಿದ್ದು ನಂತರ ವಿಚ್ಛೇದನ ಪಡೆದಿದ್ದರು. ನಂತರ ತೌಫಿಕ್ ಎಂಬಾತನನ್ನು ಮದುವೆ ಆಗಿದ್ದು, ಆತ 2011ರಲ್ಲಿ ಸಂಭವಿಸಿದ ಅಪಘಾತದಲ್ಲಿ ಅಂಗವಿಕಲರಾಗಿದ್ದರು.

ಇತ್ತೀಚೆಗೆ 18ನೇ ವಯಸ್ಸಿನ 12ನೇ ತರಗತಿ ವಿದ್ಯಾರ್ಥಿ ಜೊತೆ ಸಲುಗೆ ಬೆಳೆಸಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಶುಕ್ರವಾರ ಎರಡನೇ ಪತಿಯಿಂದ ವಿಚ್ಛೇದನ ಬಯಸಿ ಕೋರ್ಟ್ ಮೆಟ್ಟಿಲೇರಿದ್ದು, ಮತಾಂತರಗೊಂಡು ದೇವಸ್ಥಾನದಲ್ಲಿ ಬಾಲಕನನ್ನು ವಿವಾಹವಾಗಿದ್ದಾಳೆ.

ಬಾಲಕನ ತಂದೆ ದತ್ತಾರಾಮ್ ಸಿಂಗ್ ಕೂಡ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದು, ಇಬ್ಬರೂ ಒಟ್ಟಿಗೆ ಚೆನ್ನಾಗಿ ಬಾಳಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments