Monday, May 25, 2026
Google search engine
Homeದೇಶಜಮ್ಮುವಿನಲ್ಲಿ 115 ವರ್ಷಗಳಲ್ಲೇ ದಾಖಲೆ ಮಳೆಗೆ 36 ಮಂದಿ ಬಲಿ: ವೈಷ್ಣೋವಿದೇವಿ ಯಾತ್ರೆಗೆ ನಿರ್ಬಂಧ

ಜಮ್ಮುವಿನಲ್ಲಿ 115 ವರ್ಷಗಳಲ್ಲೇ ದಾಖಲೆ ಮಳೆಗೆ 36 ಮಂದಿ ಬಲಿ: ವೈಷ್ಣೋವಿದೇವಿ ಯಾತ್ರೆಗೆ ನಿರ್ಬಂಧ

ಜಮ್ಮು ಕಾಶ್ಮೀರದಲ್ಲಿ 115 ವರ್ಷಗಳಲ್ಲೇ ಕಂಡು ಕೇಳರಿಯದ ದಾಖಲೆ ಮಳೆಗೆ ಭೂಕುಸಿತ, ಮೇಘಸ್ಫೋಟದಿಂದ ಜನರು ತತ್ತರಿಸಿದ್ದು, 36 ಮಂದಿ ಅಸುನೀಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಜಮ್ಮು ಕಾಶ್ಮೀರದ ಅ‍ರ್ಧನಾರೀಶ್ವರ ಬಳಿ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದ ಮಾತಾ ವೈಷ್ಣೋವಿದೇವಿ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಜಮ್ಮ್ ಕಾಶ್ಮೀರದ ಕಾತ್ರಾದಲ್ಲಿ ಯಾತ್ರೆಗೆ ತೆರಳುತ್ತಿದ್ದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನದಿಗಳು ಅಪಾಯ ಮಟ್ಟ ಮೀರಿ ಹರಿಯತ್ತಿರುವುದರಿಂದ ಹಲವು ಸೇತುವೆಗಳು ಕುಸಿದು ಬಿದ್ದಿವೆ.

ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಎರಡು ಮೊಬೈಲ್‌ ಟವರ್‌ ಗಳು ಕುಸಿದುಬಿದ್ದಿವೆ. ಇದರಿಂದ ಮೊಬೈಲ್‌ ಸಂಪರ್ಕವೂ ಕಡಿತಗೊಂಡಿದೆ. ಈ ಎಲ್ಲಾ ಅಡೆತಡೆಗಳ ನಡುವೆಯೂ ರಕ್ಷಣಾ ಕಾರ್ಯಕ್ಕೆ ಭದ್ರತಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಭಾರೀ ಮಳೆ ಹಾಗೂ ಭೂಕುಸಿತಗಳಿಂದಾಗಿ 3500ಕ್ಕೂ ಹೆಚ್ಚು ಜನರು ಮನೆ ಮಠ ಕಳೆದುಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಗುರುವಾರದವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕಳೆದ 24 ಗಂಟೆಯಲ್ಲಿ 290.0ಮಿ.ಮೀ. ಮಳೆಯಾಗಿದೆ. 1974ರ ನಂತರ ಒಂದೇ ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿರುವುದು ದಾಖಲೆಯಾಗಿದೆ. ಅಲ್ಲದೇ ಕಳೆದೆರಡು ದಿನದಲ್ಲಿ ಒಟ್ಟಾರೆ 330 ಮಿ.ಮೀ. ಮಳೆಯಾಗಿದ್ದು 1901ರ ನಂತರ ಜಮ್ಮುವಿನಲ್ಲಿ ಅತೀ ಹೆಚ್ಚು ಮಳೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments