Wednesday, May 13, 2026
Google search engine
HomeUncategorizedಇರಾನ್‌ ನಲ್ಲಿ ಪ್ರತಿಭಟನೆಯಲ್ಲಿ5000 ಸಾವು: 24,000 ಮಂದಿ ಅರೆಸ್ಟ್

ಇರಾನ್‌ ನಲ್ಲಿ ಪ್ರತಿಭಟನೆಯಲ್ಲಿ5000 ಸಾವು: 24,000 ಮಂದಿ ಅರೆಸ್ಟ್

ಇರಾನ್‌ ನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇದುವರೆಗೆ ೫೦೦ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಸೇರಿದಂತೆ 5000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಡಿಸೆಂಬರ್‌ 28ರಂದು ಆರಂಭವಾದ ದೇಶವ್ಯಾಪಿ ಪ್ರತಿಭಟನೆಯಲ್ಲಿ ಭಯೋತ್ಪಾದಕರು ಮತ್ತು ಶಸ್ತ್ರಸಜ್ಜಿತ ಪ್ರತಿಭಟನಾಕಾರರು ಕೈವಾಡವಿದೆ ಎಂದು ಸ್ಥಳೀಯ ಅಧಿಕಾರಿಗಳು ಆರೋಪಿಸಿದ್ದಾರೆ.

1974ರಲ್ಲಿ ಇರಾನ್‌ ನಲ್ಲಿ ನಡೆದ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ನಂತರ ಇದೇ ಮೊದಲ ಬಾರಿ ನಡೆಯುತ್ತಿರುವ ದೊಡ್ಡ ಮಟ್ಟದ ಪ್ರತಿಭಟನೆಯಾಗಿದೆ.

ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ 3304 ಮಂದಿ ಅಸುನೀಗಿದ್ದರೆ, 4389 ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಹಿಂಸಾಚಾರ ಪ್ರಕರಣದಲ್ಲಿ 24,000 ಮಂದಿಯನ್ನು ಬಂಧಿಸಲಾಗಿದೆ.

ಇರಾನ್‌ ನಲ್ಲಿ ನಡೆದ ಸಂಘರ್ಷದಲ್ಲಿ ಹೊರಗಿನ ಶಕ್ತಿಗಳು ಪ್ರಭಾವ ಬೀರಿದ್ದು, ಪ್ರತಿಭಟನೆ ಹಿಂಸಾರೂಪ ಪಡೆಯಲು ಕಾರಣರಾಗಿದ್ದಾರೆ. ಭಯೋತ್ಪಾದಕರು ಇದರ ಲಾಭ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments