Monday, June 29, 2026
Google search engine
Homeಅಪರಾಧಕಲಬುರಗಿಯಲ್ಲಿ ತ್ರಿಬಲ್ ಮರ್ಡರ್ ಮಾಡಿ ಸಿಸಿಟಿವಿ ದೃಶ್ಯ ಕದ್ದ 7 ಮಂದಿ ಅರೆಸ್ಟ್!

ಕಲಬುರಗಿಯಲ್ಲಿ ತ್ರಿಬಲ್ ಮರ್ಡರ್ ಮಾಡಿ ಸಿಸಿಟಿವಿ ದೃಶ್ಯ ಕದ್ದ 7 ಮಂದಿ ಅರೆಸ್ಟ್!

ಕಲಬುರಗಿ: ಡಾಬಾಗೆ ನುಗ್ಗಿದ ದುಷ್ಕರ್ಮಿಗಳು ಮೂವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಕಲಬುಗರಿಯಲ್ಲಿ ನಡೆದಿದೆ.

ಕಲಬುರಗಿ ಹೊರವಲಯದ ಪಟ್ನಾ ಗ್ರಾಮದ ಬಳಿಯ ಡಾಬಾದಲ್ಲಿ ಮಂಗಳವಾರ ತಡರಾತ್ರಿ ಸಿದ್ಧಾರೂಢ (32), ಜಗದೀಶ್ (25), ರಾಮಚಂದ್ರ (35) ಎಂಬುವವರನ್ನು ಹತ್ಯೆ ಮಾಡಲಾಗಿದೆ.

ಹತ್ಯೆಯಾದ ಮೂವರು ಸಂಬಂಧಿಕರಾಗಿದ್ದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಪ್ರಕರಣ ಸಂಬಂಧ 7 ಮಂದಿ ಆರೋಪಿಗಳು ಪೊಲೀಸರು ಕೆಲವೇ ಗಂಟೆಗಳಲ್ಲಿ ಕಾರ್ಯಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈರಣ್ಣ ತಾಳಿಕೋಟೆ, ರಾಚಣ್ಣ ಸೇರಿದಂತೆ 7 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಪೊಲೀಸ್ ಆಯುಕ್ತ ಶರಣಪ್ಪ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆದಿದೆ.

ಕಲಬುರಗಿ ಸಬ್​ಅರ್ಬನ್ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ 1.30ರ ಸುಮಾರಿಗೆ ಡ್ರೈವರ್ ಡಾಬಾಗೆ ನುಗ್ಗಿದ ಹಂತಕರು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ಕೊಲೆ ಮಾಡಿದ ಬಳಿಕ ಹಂತಕರು ಡಾಬಾದಲ್ಲಿನ ಸಿಸಿಟಿವಿಯ ಹಾರ್ಡ್ ಡಿಸ್ಕ್ ಕದ್ದೊಯ್ದಿರುವುದು ತಿಳಿದುಬಂದಿದೆ. ಸಿಸಿಟಿವಿಯಲ್ಲಿ ಹಂತಕರ ಸಂಪೂರ್ಣ ಚಲನವಲನ ರೇಕಾರ್ಡ್ ಆಗಿತ್ತು. ಹೀಗಾಗಿ ಸಾಕ್ಷ್ಯ ಸಿಗಬಾರದು ಎಂದು ಸಿಸಿಟಿವಿಯ ಹಾರ್ಡ್ ಡಿಸ್ಕ್ ಅನ್ನೇ ಕದ್ದುಕೊಂಡು ಪರಾರಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments