Thursday, September 19, 2024
Google search engine
Homeತಾಜಾ ಸುದ್ದಿರಷ್ಯಾದಿಂದ 12 ನಗರಗಳ ಮೇಲೆ 76 ಡ್ರೋಣ್ ದಾಳಿ: 72 ವಿಫಲಗೊಳಿಸಿದ ಉಕ್ರೇನ್!

ರಷ್ಯಾದಿಂದ 12 ನಗರಗಳ ಮೇಲೆ 76 ಡ್ರೋಣ್ ದಾಳಿ: 72 ವಿಫಲಗೊಳಿಸಿದ ಉಕ್ರೇನ್!

ಕೀವ್ ಸೇರಿದಂತೆ ಉಕ್ರೇನ್ ನ ಪ್ರಮುಖ ನಗರಗಳನ್ನು ಕೇಂದ್ರೀಕರಿಸಿ ರಷ್ಯಾ ರಾತ್ರೋರಾತ್ರಿ ಡ್ರೋಣ್ ಮೂಲಕ ಕ್ಷಿಪಣಿ ದಾಳಿ ನಡೆಸಿದೆ. ಬಹುತೇಕ ದಾಳಿಯನ್ನು ಉಕ್ರೇನ್ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ.

ರಷ್ಯಾ ಕೀವ್ ಸೇರಿದಂತೆ 12 ನಗರಗಳನ್ನು ಕೇಂದ್ರೀಕರಿಸಿ ಶುಕ್ರವಾರ ತಡರಾತ್ರಿ ಡ್ರೋಣ್ ದಾಳಿ ನಡೆಸಿದೆ. 76 ಕ್ಷಿಪಣಿಗಳ ಪೈಕಿ 72 ಕ್ಷಿಪಣಿಗಳನ್ನು ಉಕ್ರೇನ್ ಸೇನೆ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ.

ವಾಯುದಾಳಿಯನ್ನು ಹಿಮ್ಮೆಟ್ಟಿಸಲು ನಮಗೆ ಇನ್ನಷ್ಟು ಶಕ್ತಿ ಬೇಕಿದೆ. ಮುಂದಿನ ದಿನಗಳಲ್ಲಿ ಈ ದಾಳಿ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡೈಮರ್ ಝೇಲೆನ್ಕಿ ಟೆಲಿಗ್ರಾಂ ಸಂದೇಶದಲ್ಲಿ ಕರೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments