Monday, November 25, 2024
Google search engine
Homeತಾಜಾ ಸುದ್ದಿ`ರಾಮಲೀಲಾ’ ನಾಟಕದಲ್ಲಿ ವೇದಿಕೆ ಮೇಲೆ ರಾಮನ ಪಾತ್ರಧಾರಿ ಹೃದಯಾಘಾತದಿಂದ ಸಾವು!

`ರಾಮಲೀಲಾ’ ನಾಟಕದಲ್ಲಿ ವೇದಿಕೆ ಮೇಲೆ ರಾಮನ ಪಾತ್ರಧಾರಿ ಹೃದಯಾಘಾತದಿಂದ ಸಾವು!

ರಾಮಾಲೀಲಾ ನಾಟಕ ಪ್ರದರ್ಶನದ ವೇಳೆ ರಾಮನ ಪಾತ್ರಧಾರಿ ವೇದಿಕೆ ಮೇಲೆಯೇ ಹೃದಯಾಘಾತದಿಂದ ಮೃತಪಟ್ಟ ಘಟನೆ ರಾಜಧಾನಿ ದೆಹಲಿಯಲ್ಲಿ ಸಂಭವಿಸಿದೆ.

ರಾಮನಂತೆ ಚಿನ್ನಾಭರಣ ಹಾಗೂ ವಸ್ತ್ರ ಧರಿಸಿ ಪಾತ್ರ ನಿಭಾಯಿಸುತ್ತಿದ್ದ 45 ವರ್ಷದ ಸುಶೀಲ್ ಕೌಶಿಕ್ ಆಸನದ ಮೇಲೆ ಕೂತು ಪ್ರದರ್ಶನ ನೀಡುತ್ತಿದ್ದಾಗಲೇ ಮೃತಪಟ್ಟಿದ್ದು, ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ವೇದಿಕೆಯ ಮೇಲೆ ಹಾಕಲಾಗಿದ್ದ ಸಿಂಹಾಸನದ ಮೇಲಿಂದ ಎದ್ದು ಎರಡು ಹೆಜ್ಜೆ ಮುಂದೆ ಇಡುತ್ತಿದ್ದಂತೆ ಸುಶೀಲ್ ಕೌಶಿಕ್ ಎದೆ ನೋವಿನಿಂದ ಕುಸಿದುಬಿದ್ದಿದ್ದು, ಕೈಗಳನ್ನು ಎದೆಯ ಮೇಲೆ ಇಟ್ಟುಕೊಂಡು ನೋವಿನಲ್ಲಿ ನರಳುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ದಾರಿಮಧ್ಯೆದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಎಸ್ ಕೆ ಕೌಶಿಕ್ ಅವರ ಪುತ್ರರಾಗಿರುವ ಸುಶೀಲ್ ಕೌಶಿಕ್ ಹವ್ಯಾಸವಾಗಿ ನಾಟಕಗಳಲ್ಲಿ ಪ್ರದರ್ಶನ ಮಾಡುತ್ತಿದ್ದು, ರಾಮನ ಪಾತ್ರ ನಿಭಾಯಿಸುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದು, ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments