ಉತ್ತರ ಕೊರಿಯಾದವರು ಉಕ್ರೇನ್ ಪ್ರವೇಶಿಸಿದರೆ ಶವಗಳ ಚೀಲದಲ್ಲಿ ವಾಪಸ್ ಹೋಗಬೇಕಾಗುತ್ತದೆ ಎಂದು ಅಮೆರಿಕ ಖಡಕ್ ಎಚ್ಚರಿಕೆ ನೀಡಿದೆ.
ರಷ್ಯಾಗೆ ಬೆಂಬಲ ನೀಡಿ ಉತ್ತರ ಕೊರಿಯಾ ಸೇನೆ ಉಕ್ರೇನ್ ಪ್ರವೇಶಿಸಲು ಪ್ರಯತ್ನಿಸಿದರೆ ಶವಗಳಾಗಿ ವಾಪಸ್ ಹೋಗಬೇಕಾಗುತ್ತದೆ ಎಂದು ಅಮೆರಿಕ ಸೇನೆ ಬಹಿರಂಗ ಎಚ್ಚರಿಕೆ ನೀಡಿದೆ.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಹೆಸರು ಉಲ್ಲೇಖಿಸದ ಅಮೆರಿಕ ರಾಯಭಾರಿ ವಿಶ್ವಸಂಸ್ಥೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಉಕ್ರೇನ್ ಗೆ ಸೇನೆ ಕಳುಹಿಸುವ ಮುನ್ನ ಉತ್ತರ ಕೊರಿಯಾ ಎರಡು ಬಾರಿ ಯೋಚಿಸಿ ನಿರ್ಧರಿಸಬೇಕು. ಏಕೆಂದರೆ ಈ ನಿರ್ಧಾರ ಅವರ ಪಾಲಿಗೆ ಅತ್ಯಂತ ಅಪಾಯಕಾರಿ ಆಗಲಿದ್ದು, ಉಕ್ರೇನ್ ಪ್ರವೇಶಿಸಿದವರು ಜೀವಂತವಾಗಿ ಮರಳಲಿದ್ದಾರೆ ಎಂದು ಅಮೆರಿಕ ಸ್ಪಷ್ಟ ಎಚ್ಚರಿಕೆ ನೀಡಿದೆ.