ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಊಟ, ಬಟ್ಟೆಯಿಂದ ಹಿಡಿದು ಮನೆಗೆ ಬೇಕಾದ ದೊಡ್ಡ ದೊಡ್ಡ ಪೀಠೋಪಕರಣಗಳ ಖರೀದಿಗೂ ಆನ್ ಲೈನ್ ನೆಚ್ಚಿಕೊಂಡಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ವರದಿ ಪ್ರಕಟವಾಗಿದೆ.
ಫೋರ್ಬ್ಸ್ ಪ್ರಕಟಿಸಿದ ವರದಿ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.89ರಷ್ಟು ಆನ್ ಲೈನ್ ವೆಬ್ ಸೈಟ್ ಗಳ ಸಂಖ್ಯೆ ಅದರಲ್ಲೂ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಗಳು ಶೇ.80ರಷ್ಟು ವೆಬ್ ಸೈಟ್ ಗಳು ವಂಚನೆ ಮಾಡುವುದಕ್ಕಾಗಿಯೇ ಹುಟ್ಟಿಕೊಂಡ ನಕಲಿ ಆಗಿದ್ದು, ಇವು ಗೂಗಲ್ ನಲ್ಲಿ ಸರ್ಚ್ ಮಾಡುವವರನ್ನೂ ಗುರಿಯಾಗಿಸಿಕೊಂಡಿವೆ. ಇದರಿಂದ ಜನರು ಸುಲಭವಾಗಿ ಇವರ ಗಾಳಕ್ಕೆ ಬೀಳುತ್ತಿದ್ದಾರೆ.
ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇನ್ [ಎಫ್ ಬಿಐ] ಆನ್ ಲೈನ್ ಶಾಪಿಂಗ್ ಮಾಡುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಕ್ರೋಮ್, ಸಫಾರಿ ಮತ್ತು ಎಡ್ಜ್ ನಂತಹ ಆನ್ ಲೈನ್ ಸರ್ಚ್ ಇಂಜಿನ್ ಆಪ್ ಗಳನ್ನು ಅಮೆರಿಕದ ಶೇ.89ರಷ್ಟು ಜನರು ಬಳಸುತ್ತಾರೆ. ಈ ಆಪ್ ಗಳನ್ನೇ ಕೇಂದ್ರೀಕರಿಸಿ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಗಳು ಕಾರ್ಯ ನಿರ್ವಹಿಸುತ್ತಿವೆ. ನಂಬಿಕಸ್ಥ ಆಪ್ ಎಂದು ಕ್ರೋಮ್, ಸಫಾರಿ ಮೂಲಕ ಗ್ರಾಹಕರನ್ನು ಪಡೆಯುವ ವೆಬ್ ಸೈಟ್ ಗಳು ನಂತರ ವಂಚನೆ ನಡೆಸುತ್ತಿವೆ ಎಂದು ಎಫ್ ಬಿಐ ವಿವರಿಸಿದೆ.
ವೀಕೆಂಡ್, ರಜಾ ದಿನ ಸೇರಿದಂತೆ ವರ್ಷದ ಬಹುತೇಕ ದಿನ ಈ ಆನ್ ಲೈನ್ ವೆಬ್ ಸೈಟ್ ಗಳು ವಂಚನೆ ಮಾಡುತ್ತಿದ್ದು, ಪ್ರತಿವರ್ಷ ಸಾವಿರಾರು ಜನರು ಈ ನಕಲಿ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಗಳಿಂದ ವಂಚನೆಗೊಳಗಾಗುತ್ತಿದ್ದಾರೆ.
ವಂಚನೆ ನಡೆಯುವುದು ಹೇಗೆ?
ಡೆಲಿವರಿಯಲ್ಲಿ ವಂಚನೆ: ಆನ್ ಲೈನ್ ನಲ್ಲಿ ಆಹಾರ ಬುಕ್ ಮಾಡಿ ಹಣ ಪಾವತಿಸಿದ ನಂತರ ಆಹಾರ ತಲುಪದೇ ಇರುವುದು.
ಶಿಪ್ಪಿಂಗ್ ಚಾರ್ಜ್ ಎಂದು ಶುಲ್ಕ ಪಡೆಯಲಾಗುತ್ತದೆ. ಆದರೆ ಯಾವುದೇ ವಸ್ತುಗಳಿಗೆ ಶಿಪ್ಪಿಂಗ್ ಶುಲ್ಕ ಇರುವುದಿಲ್ಲ.
ನೀವು ಆರ್ಡರ್ ಮಾಡಿದ್ಧೇ ಒಂದು ಬರುವುದೇ ಒಂದು. ಈ ಮೂಲಕ ನಕಲಿ ವಸ್ತುಗಳನ್ನು ತಲಪಿಸಿ ವಂಚಿಸಲಾಗುತ್ತದೆ.
ಉಡುಗೊರೆ ಕಾರ್ಡ್: ಗಿಫ್ಟ್ ಕಾರ್ಡ್ ಪಡೆಯಲು ಪ್ರೀಪೇಯ್ಡ್ ಕಾರ್ಡ್ ಪಡೆದು ವಂಚನೆ
ಹಣ ಪಡೆದು ಡೆಲಿವರಿ ಮಾಡದೇ ಇರುವ ಮೂಲಕ ಕಳೆದ ವರ್ಷ 309 ದಶಲಕ್ಷ ಡಾಲರ್ ಮೊತ್ತದ ವಂಚನೆಗಳು ನಡೆದಿವೆ. ಕ್ರೆಡಿಟ್ ಕಾರ್ಡ್ ಪಡೆದು ವಂಚಿಸುವ 173 ದಶಲಕ್ಷ ಡಾಲರ್ ವಂಚನೆ ನಡೆದಿವೆ ಎಂದು ವರದಿ ವಿವರಿಸಿದೆ.