ಮ್ಯಾನ್ಮರ್ ಮತ್ತು ಬ್ಯಾಂಕಾಂಕ್ ನಲ್ಲಿ ಸಂಭವಿಸಿದ ಭೀಕರ ಭೂಕಂಪನದಿಂದ 334 ಅಣು ಬಾಂಬ್ ಸ್ಫೋಟದಷ್ಟು ಪ್ರಭಾವಿ ಆಗಿತ್ತು ಎಂದು ಅಮೆರಿಕದ ಭೂವಿಜ್ಞಾನಿ ಹೇಳಿದ್ದಾರೆ.
ನೆರೆಯ ದೇಶಗಳಾದ ಮ್ಯಾನ್ಮರ್ ಮತ್ತು ಬ್ಯಾಂಕಾಕ್ ನಲ್ಲಿ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 7.7 ಮತ್ತು 6.8ರ ತೀವ್ರತೆ ದಾಖಲಾಗಿತ್ತು. ಈ ಭೂಕಂಪನಿಂದ ಬಿಡುಗಡೆ ಆದ ಶಕ್ತಿ 334 ಅಣುಬಾಂಬ್ ಸ್ಫೋಟಕ್ಕೆ ಸಮನಾಗಿತ್ತು ಎಂದು ಭೂವಿಜ್ಞಾನಿ ಜೆಸ್ ಫೋನೆಕ್ಸ್ ಹೇಳಿದ್ದಾರೆ.
ಭೂಕಂಪನಕ್ಕಿಂತ ನಂತರ ಕಂಪಿಸಿದ ಭೂಮಿಯಿಂದ ಸಾವಿನ ಸಂಖ್ಯೆ 1600 ದಾಟಿದೆ. ಈ ದುರಂತದಿಂದ ಚೇತರಿಸಿಕೊಳ್ಳಲು ಎರಡೂ ದೇಶಗಳಿಗೆ ಹಲವು ತಿಂಗಳೇ ಬೇಕಾಗಬಹುದು ಎಂದು ಅವರು ಹೇಳಿದ್ದಾರೆ.
ಮ್ಯಾನ್ಮರ್ ನಲ್ಲಿ ಪ್ರಸ್ತುತ ನಾಗರಿಕ ಧಂಗೆಯಿಂದ ತತ್ತರಿಸಿದೆ. ಈ ದುರಂತ ದೇಶವನ್ನು ಒಗ್ಗೂಡಿಸಬಹುದು. ಈ ದೇಶದಲ್ಲಿ 2021ರಿಂದ ಸೇನಾ ಆಡಳಿತ ಜುಂತಾ ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಎಲ್ಲಿಂದ ನೆರವು ಬಂದರೂ ಸ್ವೀಕರಿಸುತ್ತೇವೆ ಎಂದು ಹೇಳಿಕೆ ನೀಡಿದೆ.



