Wednesday, December 24, 2025
Google search engine
Homeದೇಶಕ್ಷಣಾರ್ಧದಲ್ಲಿ ಡ್ರೋಣ್ ಹೊಡೆದುರುಳಿಸುವ ಲೇಸರ್ ಶಸ್ತ್ರಾಸ್ತ್ರ ಯಶಸ್ವಿ ಪರೀಕ್ಷೆ!

ಕ್ಷಣಾರ್ಧದಲ್ಲಿ ಡ್ರೋಣ್ ಹೊಡೆದುರುಳಿಸುವ ಲೇಸರ್ ಶಸ್ತ್ರಾಸ್ತ್ರ ಯಶಸ್ವಿ ಪರೀಕ್ಷೆ!

ಡ್ರೋಣ್ ಗಳನ್ನು ಹೊಡೆದುರುಳಿಸುವ ಲೇಸರ್ ಆಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.

ಡಿಆರ್ ಡಿಒ ಭಾನುವಾರ ಬೆಳಿಗ್ಗೆ ಡ್ರೋಣ್ ಹೊಡೆದುರುಳಿಸುವ ಅತ್ಯಾಧುನಿಕ ಸ್ವದೇಶೀ ಲೇಸರ್ ಶಸ್ತ್ರಾಸ್ತ್ರ ವ್ಯವಸ್ಥೆ ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಭಾರತ ಸ್ಥಾನ ಪಡೆದಿದೆ.

ಅತ್ಯಾಧುನಿಕ ಕ್ಷಿಪಣಿ, ಡ್ರೋಣ್ ಮತ್ತು ಕಿರು ದಾಳಿಗಳನ್ನು ಅತ್ಯಾಧುನಿಕ ಲೇಸರ್ ತಂತ್ರಜ್ಞಾನದ ಮೂಲಕ ಹೊಡೆದುರಳಿಸಬಹುದಾಗಿದ್ದು, ಇದಕ್ಕೂ ಮೊದಲು ಅಮೆರಿಕ, ಚೀನಾ ಮತ್ತು ರಷ್ಯಾ ಈ ತಂತ್ರಜ್ಞಾನ ಹೊಂದಿದ್ದವು. ಈಗ ಈ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಿದೆ.

30 ಕಿಲೋ ವ್ಯಾಟ್ ಸಾಮರ್ಥ್ಯದ ಖಂಡಾಂತರ ವ್ಯವಸ್ಥೆ ಹೊಂದಿರುವ ಈ ವ್ಯವಸ್ಥೆ ಏಕಕಾಲದಲ್ಲಿ ನಡೆಯುವ ಹಲವು ಡ್ರೋಣ್ ಗಳನ್ನು ಹೊಡೆದುರುಳಿಸಬಲ್ಲದಾಗಿದೆ. ಇದರಿಂದ ಡ್ರೋಣ್ ಗಳು ನಿಗದಿತ ಗುರಿ ತಲುಪದಂತೆ ತಡೆಯಬಲ್ಲದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments