Saturday, May 30, 2026
Google search engine
Homeವಿದೇಶಇಸ್ರೇಲ್ ಪ್ರಮುಖ ವಿಮಾನ ನಿಲ್ದಾಣದ ಮೇಲೆ ಹೌಥಿ ಕ್ಷಿಪಣಿ ದಾಳಿ!

ಇಸ್ರೇಲ್ ಪ್ರಮುಖ ವಿಮಾನ ನಿಲ್ದಾಣದ ಮೇಲೆ ಹೌಥಿ ಕ್ಷಿಪಣಿ ದಾಳಿ!

ಯೆಮೆನ್ ನಿಂದ ಇರಾನ್ ಬೆಂಬಲಿತ ಹೌಥಿ ಸಂಘಟನೆ ಖಂಡಾಂತರ ಕ್ಷಿಪಣಿ ಬಳಸಿ ಇಸ್ರೇಲ್ ನ ಅತ್ಯಾಧುನಿಕ ಹಾಗೂ ಪ್ರಮುಖ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದ್ದಾರೆ.

ಬೆನ್ ಗುರಿಯನ್ ವಿಮಾನ ನಿಲ್ದಾಣದ ಮೇಲೆ ಹಲವು ವಿಫಲ ದಾಳಿ ನಂತರ ಭಾನುವಾರ ಕ್ಷಿಪಣಿ ದಾಳಿ ನಡೆಸಿದೆ. ದಾಳಿ ಬೆನ್ನಲ್ಲೇ ಇಸ್ರೇಲ್ 7 ಪಟ್ಟು ಹೆಚ್ಚಿನ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಇಸ್ರೇಲ್ ವಾಯುಪಡೆಗಳು ಈ ದಾಳಿಯನ್ನು ತಡೆಯಲು ವಿಫಲವಾಗಿದ್ದರಿಂದ ಸಾಕಷ್ಟು ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಆದರೆ ದಾಳಿಯ ಪರಿಣಾಮಗಳ ಕುರಿತು ಯಾವುದೇ ಹೇಳಿಕೆ ಬಿಡುಗಡೆ ಆಗಿಲ್ಲ.

ವಿಮಾನ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿದ್ದ 6 ಮಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕ್ಷಿಪಣಿ ದಾಳಿಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments