Tuesday, June 30, 2026
Google search engine
Homeವಿದೇಶಪಾಕಿಸ್ತಾನಕ್ಕೆ ತ್ರಿಬಲ್ ಶಾಕ್: ಭಾರತ, ಬಲೂಚಿಸ್ತಾನ, ತಾಲಿಬಾನ್ ದಾಳಿ!

ಪಾಕಿಸ್ತಾನಕ್ಕೆ ತ್ರಿಬಲ್ ಶಾಕ್: ಭಾರತ, ಬಲೂಚಿಸ್ತಾನ, ತಾಲಿಬಾನ್ ದಾಳಿ!

ಉಗ್ರರಿಗೆ ಬೆಂಬಲ ನೀಡಿ ಸಿಕ್ಕಿಬಿದ್ದಿರುವ ಪಾಕಿಸ್ತಾನ ಇದೀಗ ಒಂದಲ್ಲ, ಎರಡಲ್ಲ, ಮೂರು ಕಡೆಗಳಿಂದ ಆಗುತ್ತಿರುವ ದಾಳಿಗಳಿಂದ ತತ್ತರಿಸುತ್ತಿದೆ.

ಪೆಹಲ್ಗಾಮ್ ನಲ್ಲಿ ಉಗ್ರರು 26 ಪ್ರವಾಸಿಗರನ್ನು ಹತ್ಯೆಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ನಡೆಸಿದ್ದ ಭಾರತ ಇದೀಗ ಪಾಕಿಸ್ತಾನದ ಹಲವು ನಗರಗಳ ಮೇಲೆ ದಾಳಿ ನಡೆಸಿದೆ.

ಇದೇ ವೇಳೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸುತ್ತಿರುವ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಕೂಡ ಪಾಕಿಸ್ತಾನದ 12 ನಗರಗಳ ಮೇಲೆ ದಾಳಿ ನಡೆಸಿದೆ. ಕಳೆದ ತಿಂಗಳು ಪಾಕಿಸ್ತಾನ ಪ್ರಯಾಣಿಕರ ರೈಲು ಅಪಹರಿಸಿದ್ದ ಬಲೂಚಿಸ್ತಾನ ಆರ್ಮಿ ಹಲವು ಕಡೆ ಆತ್ಮಾಹುತಿ ದಾಳಿ ನಡೆಸಿದೆ.

ಇದೆಲ್ಲದರ ನಡುವೆ ನೆರೆಯ ಆಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾಲ್ ಆರ್ಮಿ ಕೂಡ ಪಾಕಿಸ್ತಾನದ ಹಲವು ಕಡೆ ದಾಳಿ ನಡೆಸಿದೆ. ತೆಹ್ರಿಕ್ ತಾಲಿಬಾನ್ ಸಂಘಟನೆ ನಡೆಸಿದ ದಾಳಿಯಲ್ಲಿ 20ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ. ಇದರಿಂದ ಪಾಕಿಸ್ತಾನಿಯರು ಯಾರ ವಿರುದ್ಧ ಹೋರಾಡಬೇಕು? ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ಅರಿಯದೇ ಗೊಂದಲಕ್ಕೀಡಾಗಿದ್ದಾರೆ.

ಶತ್ರು ರಾಷ್ಟ್ಗವಾಗಿ ಗುರುತಿಸಿಕೊಂಡಿರುವ ಭಾರತದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ದಾಳಿ ಪ್ರಯತ್ನಗಳು ಹುಸಿಯಾಗುತ್ತಿವೆ. ಅಲ್ಲದೇ ಭಾರತ ಕರಾಚಿ ಬಂದರು ಸೇರಿದಂತೆ ಹಲವು ಪ್ರಮುಖ ನಗರಗಳ ಮೇಲೆ ದಾಳಿ ಮಾಡಿದ್ದೂ ಅಲ್ಲದೇ ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯನ್ನೇ ಧೂಳೀಪಟ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments