Tuesday, May 26, 2026
Google search engine
Homeಅಪರಾಧಪೂಜೆ ಮಾಡಿಸುವ ನೆಪದಲ್ಲಿ ಮಹಿಳೆಯ ಬೆತ್ತಲೆ ವೀಡಿಯೋ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಅರ್ಚಕ ಅರೆಸ್ಟ್, ಮುಖ್ಯ...

ಪೂಜೆ ಮಾಡಿಸುವ ನೆಪದಲ್ಲಿ ಮಹಿಳೆಯ ಬೆತ್ತಲೆ ವೀಡಿಯೋ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಅರ್ಚಕ ಅರೆಸ್ಟ್, ಮುಖ್ಯ ಅರ್ಚಕ ಪರಾರಿ!

ಬೆಂಗಳೂರಿನ ಮಹಿಳೆಯ ಬೆತ್ತಲೆ ವೀಡಿಯೋ ಮಾಡಿ ಬ್ಲಾಕ್ ಮೇಲ್ ಮೂಲಕ ಅತ್ಯಾಚಾರಕ್ಕೆ ಯತ್ನಿಸಿದ ಕೇರಳದ ದೇವಸ್ಥಾನವೊಂದರ ಅರ್ಚಕನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನದ ಅರ್ಚಕ ಅರುಣ್ ಎಂಬಾತನನ್ನು ಬೆಂಗಳೂರಿನ ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ, ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದಾನೆ.

ಪೂಜೆ ಮಾಡಿಸಲೆಂದು ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಗೆ ಮಾಟ ಮಾಂತ್ರದ ಬೆದರಿಕೆಯೊಡ್ಡಿ ಮುಖ್ಯ ಅರ್ಚಕ ಹಾಗೂ ಅರ್ಚಕ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಕೇರಳದ ಪೆರಿಂಗೋಟ್ಟುಕ್ಕಾರ ದೇಗುಲದ ಬಗ್ಗೆ ಕೇಳಿತಿಳಿದಿದ್ದರು. ಹೀಗಾಗಿ ಅಲ್ಲಿಗೆ ಪೂಜೆ ಮಾಡಿಸಲೆಂದು ತೆರಳಿದ್ದರು. ಆ ವೇಳೆ ಪರಿಚಯವಾಗಿದ್ದ ಅರ್ಚಕರು, ಪೂಜೆಯ ಹೆಸರಿನಲ್ಲಿ ಮತ್ತು ಮಾಟ-ಮಂತ್ರ ಹೆಸರಿನಲ್ಲಿ ಮಹಿಳೆ ಜತೆ ವಾಟ್ಸ್​​ಆ್ಯಪ್​ ವಿಡಿಯೋ ಕಾಲ್ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ.

ಮತ್ತೊಂದು ಪೂಜೆ ಮಾಡಿಸುವುದಾಗಿ ಕರೆಸಿಕೊಂಡು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ಬೆಳ್ಳಂದೂರು ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತೆ ಮಹಿಳೆ ಉಲ್ಲೇಖಿಸಿದ್ದಾರೆ.

ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳಿಂದ ಬಳಲುತ್ತಿದ್ದ ಬೆಂಗಳೂರಿನ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬಂದ ಮಾಹಿತಿ ಆಧರಿಸಿ ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನದಲ್ಲಿ ಪರಿಹಾರ ಪೂಜೆ ಮಾಡಿಸಲು ತೆರಳಿದ್ದರು.

ಸಂತ್ರಸ್ತೆಗೆ ಅರ್ಚಕರ ಜತೆ ಮಲಯಾಳಂ ಭಾಷೆಯಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ. ತಮಿಳು ಮತ್ತು ಕನ್ನಡವಷ್ಟೇ ಬರುತ್ತಿದ್ದ ಸಂತ್ರಸ್ತೆಗೆ ಅರ್ಚಕ ಅರುಣ್ ಎಂಬಾತ ಪರಿಚಯವಾಗಿದ್ದಾನೆ. ಆತ ತಮಿಳಿನಲ್ಲಿ ಮಾತನಾಡಿ ಅದನ್ನು ಅರ್ಚಕರಿಗೆ ತಿಳಿಸಿದ್ದ. ನಂತರ 24 ಸಾವಿ ರೂ. ಕೊಟ್ಟರೆ ಪೂಜೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾನೆ. ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ ಆತ, ಸಂತ್ರಸ್ತೆ ಬೆಂಗಳೂರಿಗೆ ಬಂದ ನಂತರ ಹಲವು ಬಾರಿ ಕರೆ ಮಾಡಿದ್ದ.

ನಿಮ್ಮ ಮೇಲೆ ಮಾಟ-ಮಂತ್ರ ಆಗಿದೆ. ಅದನ್ನು ಹೋಗಲಾಡಿಸಲು ಪೂಜೆ ಮಾಡುತ್ತೇನೆ. ಹೇಳಿದಂತೆ ನೀವು ಮಾಡಬೇಕು ಎಂದಿದ್ದ. ನಂತರ ವಾಟ್ಸಪ್ ವಿಡಿಯೋ ಕಾಲ್​​ನಲ್ಲಿ ಮಹಿಳೆಗೆ ಬಟ್ಟೆ ಬಿಚ್ಚಲು ಹೇಳಿದ್ದಾರೆ. ಸಂತ್ರಸ್ತೆ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಆತ, ಮಕ್ಕಳ ಮೇಲೆ ಮಾಟ ಮಂತ್ರ ಮಾಡಿಸುವೆ ಎಂದು ಬೆದರಿಕೆ ಹಾಕಿ, ಮಹಿಳೆ ನಗ್ನಳಾಗುವಂತೆ ಮಾಡಿದ್ದ.

ನಂತರ ಮತ್ತೆ ವಿಶೇಷ ಪೊಜೆಗೆಂದು ದೇವಸ್ಥಾನಕ್ಕೆ ಬರುವಂತೆ ತಿಳಿಸಿದ್ದ. ಬ್ಲ್ಯಾಕ್​ಮೇಲ್​​ಗೆ ಹೆದರಿ ಮಹಿಳೆ ದೇಗುಲಕ್ಕೆ ತೆರಳಿದ್ದರು. ಆಕೆಯ ಬಳಿ ಪೂಜೆ ಮಾಡಿಸಿದ್ದ ಅರುಣ್ ಹಾಗೂ ಮುಖ್ಯ ಅರ್ಚಕ, ಧಾರ್ಮಿಕ ಕ್ರಿಯೆ ಇದೆ ಎಂದು ಬಲವಂತವಾಗಿ ಕಾರಿನಲ್ಲಿ ಕಾಡಿಗೆ ಕರೆದುಕೊಂಡು ಹೋಗಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಮುಂದಾಗಿದ್ದರು ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.

ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ಮಹಿಳೆ ಅಲ್ಲಿಂದ ಬೆಂಗಳೂರಿಗೆ ಮರಳಿದ ನಂತರ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ. ಬಂಧಿತನ ವಿರುದ್ಧ ಬಿಎನ್​ಎಸ್ ಕಾಯ್ದೆಯ ವಿವಿಧ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments