Wednesday, June 24, 2026
Google search engine
Homeಮನರಂಜನೆಹೃಷಿಕೇಶದಲ್ಲಿ ರಸ್ತೆಬದಿ ಭೋಜನ ಸವಿದ ರಜನಿಕಾಂತ್‌

ಹೃಷಿಕೇಶದಲ್ಲಿ ರಸ್ತೆಬದಿ ಭೋಜನ ಸವಿದ ರಜನಿಕಾಂತ್‌

ಹಿಮಾಲಯದಲ್ಲಿ ಆಧ್ಯಾತ್ಮಿಕ ಪ್ರಯಾಣದ ವೇಳೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಹೃಷಿಕೇಶದಲ್ಲಿ ರಸ್ತೆಬದಿಯಲ್ಲಿ ಭೋಜನ ಸವಿದ ವೀಡಿಯೋ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಿಡುವಿಲ್ಲದ ಸಿನಿಮಾ ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಹಿಮಾಲಯದಲ್ಲಿ ಸ್ನೇಹಿತರ ಜೊತೆ ಸುತ್ತಾಡಿದ್ದಾರೆ. ಈ ವೇಳೆ ಹೃಷಿಕೇಶದಲ್ಲಿ ರಸ್ತೆ ಬದಿಯ ಹೋಟೆಲ್‌ ನಲ್ಲಿ ಆಹಾರ ಪಡೆದು ರಸ್ತೆ ಬದಿಯ ಕಟ್ಟೆಯ ಮೇಲೆ ಸೇವಿಸಿದ್ದಾರೆ.

ಸಿನಿಮಾದಲ್ಲಿ ಸ್ಟೈಲ್‌ ಮಾಡಿ ಖ್ಯಾತರಾಗಿರುವ ರಜನಿಕಾಂತ್‌ ಸಾಧಾರಣ ಬಿಳಿ ವಸ್ತ್ರ ಮತ್ತು ಪಂಚೆಯಲ್ಲಿ ಸಾಮಾನ್ಯರಂಥೆ ಅಡಿಕೆ ಎಲೆಯಲ್ಲಿ ಮಾಡಿರುವ ತಟ್ಟೆಯಲ್ಲಿ ದೋಸೆ ಹಾಗೂ ಇನ್ನಿತರ ತಿಂಡಿಗಳನ್ನು ಸೇವಿಸಿದ್ದಾರೆ.

ಹೃಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ರಜನಿಕಾಂತ್‌ ಭೇಟಿ ನೀಡಿದ್ದು, ದಯಾನಂದ ಸರಸ್ವತಿಗೆ ಪೂಜೆ ಸಲ್ಲಿಸಿದ್ದು, ನಂತರ ಗಂಗಾನದಿಯಲ್ಲಿ ನಡೆಯುವ ಗಂಗಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕೂಲಿ ಚಿತ್ರದ ಯಶಸ್ಸಿನ ನಂತರ ರಜನಿಕಾಂತ್‌ ಹಿಮಾಲಯದ ಕಡೆ ತೆರಳಿದ್ದು, ಜೈಲರ್‌ -2 ಚಿತ್ರದ ಚಿತ್ರೀಕರಣ ಆರಂಭಿಸುವ ಮುನ್ನ ಬಿಡುವು ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments