ಪತ್ನಿ ಬೇರೋಬ್ಬನ ಜೊತೆ ಓಡಿ ಹೋದ ಹಿನ್ನೆಲೆಯಲ್ಲಿ ಬೇಸತ್ತ ಗಂಡ ನಾಲ್ವರು ಮಕ್ಕಳ ಜೊತೆ ಯಮುನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದ ಬಳಿ ಸಂಭವಿಸಿದೆ.
ಪತ್ನಿ ಕುಶುಮಾನ ಪ್ರಿಯಕರನ ಜೊತೆ ಓಡಿ ಹೋಗಿದ್ದರಿಂದ ನೊಂದ ಪತಿ ಸಲ್ಮಾನ್ ರೆಕಾರ್ಡ್ ಮಾಡಿದ ವೀಡಿಯೋವನ್ನು ಸೋದರಿ ಗುಲಿಸ್ಟಾಗೆ ಕಳುಹಿಸಿ ಯಮುನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುಲಿಸ್ಟಾ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆv ಧಾವಿಸಿ ರಕ್ಷಣೆ ಕಾರ್ಯಕ್ಕೆ ಮುಂದಾಗಿದ್ದು, ಅಷ್ಟರಲ್ಲಿ ಕಾಲ ಮಿಂಚಿತ್ತು.
ಮಹಕ್ (12), ಶಿಫಾ (5), ಅಮನ್ (3) ಮತ್ತು 8 ತಿಂಗಳ ಮಗು ಜೊತೆ ಸಲ್ಮಾನ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಶುಮಾನ ಮತ್ತು ಸಲ್ಮಾನ್ ಮದುವೆ ಆಗಿ 15 ವರ್ಷಗಳು ಕಳೆದಿದ್ದು, ದಂಪತಿ ನಡುವೆ ಪದೇಪದೆ ಜಗಳ ಆಗುತ್ತಿತ್ತು. ಶುಕ್ರವಾರ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.



