ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾರಾಟಕ್ಕೆ ಮುಂದಾದ ಬೆನ್ನಲ್ಲೇ ಐಪಿಎಲ್ ನ ಮತ್ತೊಂದು ಫ್ರಾಂಚೈಸಿ ಕೂಡ ಮಾರಾಟಕ್ಕೆ ಸಜ್ಜಾಗಿದೆ.
ಹೌದು ಆರ್ ಸಿಬಿ ತಂಡ 2 ಶತಕೋಟಿ ಡಾಲರ್ ಗೆ ಫ್ರಾಂಚೈಸಿ ಮಾರಾಟಕ್ಕೆ ಮುಂದಾಗಿದೆ. ಇದರ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಮಾರಾಟಕ್ಕೆ ಮಂದಾಗಿದೆ ಎಂದು ಹೇಳಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜಯ್ ಗೋಯೆಂಕಾ ಅವರ ಸೋದರ ಹರೀಶ್ ಗೋಯೆಂಕಾ ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಒಂದಲ್ಲ, ಎರಡು ಐಪಿಎಲ್ ತಂಡಗಳು ಮಾರಾಟಕ್ಕಿವೆ ಎಂದು ತಿಳಿಸಿದ್ದಾರೆ.
ಆರ್ ಸಿಬಿ ಮಾತ್ರವಲ್ಲ ರಾಜಸ್ಥಾನ್ ರಾಯಲ್ಸ್ ಕೂಡ ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ. ಐಪಿಎಲ್ ಜನಪ್ರಿಯತೆಯನ್ನು ಬಂಡವಾಳ ಮಾಡಿಕೊಂಡು ಹಣ ಗಳಿಸುವುದು ಈಗಿನ ಟ್ರೆಂಡ್ ಆಗಿದೆ ಎಂದು ಹರೀಶ್ ಗೋಯೆಂಕಾ ಹೇಳಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕತ್ವ ಹೊಂದಿರುವ ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಶೇ. 65 ಷೇರು ಹೊಂದಿದೆ. ಆರ್ ಸಿಬಿ ಮತ್ತು ಆರ್ ಆರ್ ತಂಡಗಳ ಖರೀದಿಗೆ 4ರಿಂದ 5 ಮಂದಿ ಮುಂದೆ ಬಂದಿದ್ದಾರೆ ಎಂಬ ಮಾಹಿತಿ ಇದೆ ಎಂದು ಅವರು ಹೇಳಿದ್ದಾರೆ.



