Thursday, 12 November 2026 — Kannadavahini
BREAKING NEWS
ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್ ರಾಜ್ಯ ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ವಾಪಸ್: ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಹಸಿರು ನಿಶಾನೆ ರಾಜ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರಿಂದ ಜೈಲ್ ಭರೋ ಹೋರಾಟ ತೀವ್ರ ಕಾನೂನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭ: ಸುಪ್ರೀಂ ಮಹತ್ವದ ತೀರ್ಪು ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್ ರಾಜ್ಯ ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ವಾಪಸ್: ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಹಸಿರು ನಿಶಾನೆ ರಾಜ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರಿಂದ ಜೈಲ್ ಭರೋ ಹೋರಾಟ ತೀವ್ರ ಕಾನೂನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭ: ಸುಪ್ರೀಂ ಮಹತ್ವದ ತೀರ್ಪು
ವಿಶೇಷ

ಕಾಂಡೋಮ್ ಗಾಗಿ 1 ಲಕ್ಷ ಖರ್ಚು ಮಾಡಿದ ಗ್ರಾಹಕ: 127 ಆನ್ ಲೈನ್ ಆರ್ಡರ್ ನಲ್ಲಿ 1 ಕಾಂಡೋಮ್

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 26 ವೀಕ್ಷಣೆಗಳು
online delivery

ಒಬ್ಬ ಗ್ರಾಹಕ ವರ್ಷಪೂರ್ತಿ ಕಾಂಡೋಮ್ ಖರೀದಿಗಾಗಿ 1 ಲಕ್ಷ ರೂ. ವೆಚ್ಚ ಮಾಡಿದ್ದಾರೆ. 2025ನೇ ಸಾಲಿನಲ್ಲಿ 127 ಆನ್ ಲೈನ್ ಆರ್ಡರ್ ಗಳ ಪೈಕಿ 1 ಕಾಂಡೋಮ್ ಆರ್ಡರ್ ಇರುತ್ತದೆ.

ಹೌದು, ಸ್ವಿಗ್ಗಿಯ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಮಾರ್ಟ್‌ನ 2025ರ ವರದಿ ಬಿಡುಗಡೆ ಆಗಿದ್ದು, ದೇಶದಲ್ಲಿ ಪ್ರತೀ ವರ್ಷ ಹೆಚ್ಚಾಗುತ್ತಿರುವ ಆನ್ ಲೈನ್ ಶಾಪಿಂಗ್ ಕುರಿತು 2025 ಕುತೂಹಲದ ಅಂಶಗಳನ್ನು ಬಹಿರಂಗಪಡಿಸಿದೆ.

`ಹೌ ಇಂಡಿಯಾ ಇನ್‌ಸ್ಟಾಮಾರ್ಟೆಡ್ 2025’ ಎಂಬ ಶೀರ್ಷಿಕೆಯ ವರದಿಯ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ 400% ಬೆಳವಣಿಗೆ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಕಾಂಡೋಮ್​ಗಳನ್ನು ಖರೀದಿಸಲಾಗಿದೆ. ಆರ್ಡರ್‌ಗಳಲ್ಲಿ ಶೇ.24ರಷ್ಟು ಹೆಚ್ಚಳವಾಗಿದೆ.

2025ನೇ ಸಾಲಿನಲ್ಲಿ ಚೆನ್ನೈನ ಒಬ್ಬ ಗ್ರಾಹಕ ಕಾಂಡೋಮ್ ಗಾಗಿ 1 ಲಕ್ಷ ರೂ. ಖರ್ಚು ಮಾಡಿದರೆ, ಮುಂಬೈನ ಗ್ರಾಹಕ ರೆಡ್ ಬುಲ್ ಶುಗರ್ ಫ್ರೀಗಾಗಿ 16.3 ಲಕ್ಷ ರೂ ಖರ್ಚು ಮಾಡಿದ್ದಾರೆ. ಹೈದರಾಬಾದ್  ವ್ಯಕ್ತಿ ಗುಲಾಬಿಗಳಿಗಾಗಿ 31,240 ಸಾವಿರ ರೂ ಖರ್ಚು ಮಾಡಿದ್ದಾರೆ. ಚೆನ್ನೈನ ಇನ್‌ಸ್ಟಾಮಾರ್ಟ್ ಬಳಕೆದಾರನೊಬ್ಬ ತನ್ನ ಸಾಕುಪ್ರಾಣಿಗಳ ಅಗತ್ಯ ವಸ್ತು, ಆಹಾರಕ್ಕಾಗಿ 2.41 ಲಕ್ಷ ರೂ ಖರ್ಚು ಮಾಡಿದ್ದಾರೆ. ನೊಯ್ಡಾದ “ಜಿಮ್-ಬ್ರೋ” 1,343 ಪ್ರೋಟೀನ್ ವಸ್ತುಗಳಿಗಾಗಿ 2.8 ಲಕ್ಷ ಖರ್ಚು ರೂ ಮಾಡಿದ್ದಾನೆ.

ಹೈದರಾಬಾದ್ ಮೂಲದ ಐಫೋನ್​ ಪ್ರೇಮಿಯೊಬ್ಬರು, ಒಂದೇ ಸಲ ಮೂರು ಐಫೋನ್ 17 ಖರೀದಿಸಲು 4.3 ಲಕ್ಷ ರೂ. ಖರ್ಚು ಮಾಡಿದ್ದಾರೆ. ನೋಯ್ಡಾ ಮೂಲದ ಗ್ರಾಹಕನೊಬ್ಬ ಟೆಕ್ನೋ-ಹಾಲಿಕ್ ಬ್ಲೂಟೂತ್ ಸ್ಪೀಕರ್‌ಗಳು, ಎಸ್‌ಎಸ್‌ಡಿಗಳು ಮತ್ತು ರೋಬೋಟಿಕ್ ವ್ಯಾಕ್ಯೂಮ್‌ಗಳನ್ನು ಒಟ್ಟಿಗೆ ಒಂದೇ ಸಲ 2.69 ಲಕ್ಷ ರೂ. ಕೊಟ್ಟು ಖರೀದಿಸಿದ್ದಾನೆ.

ಬೆಂಗಳೂರಿನ ನಿವಾಸಿಯೊಬ್ಬರು ಧಂತೇರಸ್ ಹಬ್ಬದ ವೇಳೆ ಡೆಲಿವರಿ ಬಾಯ್ಸ್​​ಗೆ 68,600 ರೂ. ಟಿಪ್ಸ್ ನೀಡಿದ್ದಾರೆ.

ಕರಿಬೇವು, ದಹಿ, ಮೊಟ್ಟೆ, ಹಾಲು ಮತ್ತು ಬಾಳೆಹಣ್ಣುಗಳು ಸೇರಿದಂತೆ ಅಡುಗೆಮನೆಯ ಚಿಕ್ಕಪುಟ್ಟ ವಸ್ತುಗಳಿಗೂ ಜನರು ಆನ್ ಲೈನ್ ಮೊರೆ ಹೋಗುತ್ತಿದ್ದಾರೆ. ಕೊಚ್ಚಿಯಲ್ಲಿ ಒಬ್ಬ ಫ್ಲೇವರ್ ಅಭಿಮಾನಿ 368 ಕರಿಬೇವು ಆರ್ಡರ್‌ಗಳನ್ನು ಮಾಡಿ ಅಚ್ಚರಿ ಮೂಡಿಸಿದ್ದಾರೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8409 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment