Saturday, June 27, 2026
Google search engine
Homeಅಪರಾಧಸಾವಿನ ಮನೆಯಲ್ಲೂ ಲಕ್ಷಾಂತರ ದೋಚಿದ ಕಳ್ಳರು!

ಸಾವಿನ ಮನೆಯಲ್ಲೂ ಲಕ್ಷಾಂತರ ದೋಚಿದ ಕಳ್ಳರು!

ಮನೆ ಕುಸಿದು ಮೃತಪಟ್ಟಿದ್ದ ಗೋಪಾಲ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಇವರ ಮನೆಯಲ್ಲಿಟ್ಟಿದ್ದ ನಗದು, 15 ಲಕ್ಷ ರೂಪಾಯಿಗಳ ಒಡವೆ ಕಳ್ಳತನವಾಗಿದೆ.

ವಿಜಯಲಕ್ಷ್ಮಿ ಮತ್ತು ಗೋಪಾಲ್ ಎಂಬುವರು ಆರೋಗ್ಯ ಸಮಸ್ಯೆಯಿಂದ‌ ಕಳೆದ ಎರಡು ತಿಂಗಳ ಹಿಂದೆ ಸಾವನಪ್ಪಿದ್ದರು ಗೋಪಾಲ್ ಮಗಳು ಬಾಂಬೆಗೆ ಹೋಗಿದ್ದ ವೇಳೆ ಕಳ್ಳರು ಕಳ್ಳತನ ಮಾಡಿದ್ದಾರೆ.

ಮನೆಯ ಗೇಟ್ ಬೀಗ ಹಾಕಿದ್ದು ಕಾಂಪೌಂಡ್ ಹಾರಿ ಮನೆಯ ಬೀರುವಿನ ಲಾಕರ್ ಹೊಡೆದು, ಒಳಗೆ ನುಗಿದ್ದ ಕಳ್ಳರು ಒಡವೆಗಳನ್ನು ಕಳ್ಳತನ ಮಾಡಿದ್ದಾರೆ. ಹಾಗೆ ಪಕ್ಕದ ಮನೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿದ್ದ

70 ಸಾವಿರ ನಗದು, 15 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನ ಕಳ್ಳರು ದೋಚಿದ್ದಾರೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments