Wednesday, June 24, 2026
Google search engine
Homeಮನರಂಜನೆಭಾರತಕ್ಕೆ ಅಭಾರಿಯಾಗಿದ್ದೇನೆ: ವಿವಾದ ಬೆನ್ನಲ್ಲೇ ಎಆರ್‌ ರೆಹಮಾನ್‌ ಹೇಳಿಕೆ

ಭಾರತಕ್ಕೆ ಅಭಾರಿಯಾಗಿದ್ದೇನೆ: ವಿವಾದ ಬೆನ್ನಲ್ಲೇ ಎಆರ್‌ ರೆಹಮಾನ್‌ ಹೇಳಿಕೆ

ಮುಸ್ಲಿಮನಾಗಿದ್ದರುವುದರಿಂದ ನನಗೆ ಬಾಲಿವುಡ್‌ ನಲ್ಲಿ ಅವಕಾಶಗಳು 8 ವರ್ಷದಿಂದ ಕೈ ತಪ್ಪಿದ್ದವು ಎಂಬ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಆರ್‌ ರೆಹಮಾನ್‌ ತೇಪೆ ಹಚ್ಚುವ ಕೆಲಸ ಮಾಡಿದ್ದು, ಭಾರತಕ್ಕೆ ನಾನು ಯಾವಾಗಲೂ ಆಭಾರಿಯಾಗಿದ್ದೇನೆ. ನನ್ನ ಹೇಳಿಕೆಯ ಅರ್ಥ ಇದಾಗಿರಲಿಲ್ಲ ಎಂದಿದ್ದಾರೆ.

ಸಂದರ್ಶನದ ವೇಳೆ ಎಆರ್‌ ರೆಹಮಾನ್‌ ನೀಡಿದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ವೀಡಿಯೋ ಬಿಡುಗಡೆ ಮಾಡಿರುವ ರೆಹಮಾನ್‌, ಭಾರತ ಹಲವು ಸ್ಫೂರ್ತಿಗಳ ತವರು ಮನೆ. ಸಂಗೀತದಲ್ಲಿ ನನಗೆ ಯಾವಾಗಲೂ ಸ್ಫೂರ್ತಿಯಾಗಿದ್ದು, ಮಹತ್ವದ ಪಾತ್ರ ವಹಿಸಿದೆ ಎಂದಿದ್ದಾರೆ.

ನನ್ನ ಹೇಳಿಕೆಯ ಉದ್ದೇಶದ ಆದಾಗಿರದೇ ಇದ್ದರೂ ತಪ್ಪು ಕಲ್ಪನೆಗೆ ಕಾರಣವಾಗಿದೆ. ನನ್ನ ದೇಶಕ್ಕಾಗಿ ನಾನು ಸಂಗೀತದ ಮೂಲಕ ಸೇವೆ ಮುಂದುವರಿಸಲು ಬಯಸುತ್ತೇನೆ. ನನ್ನ ಪ್ರಾಮಾಣಿಕತೆ ನಿಮಗೆ ಅರ್ಥವಾಗುತ್ತದೆ ಎಂದು ಅವರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments