ಗ್ರಾಮೀಣ ಪ್ರತೀಭೆ ಗಿಲ್ಲಿ ನಟ ಬಿಗ್ ಬಾಸ್ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಭಾನುವಾರ ನಡೆದ ಫಿನಾಲೆಯಲ್ಲಿ 40 ಕೋಟಿಗೂ ಅಧಿಕ ಮತಗಳನ್ನು ಪಡೆದ ಮಂಡ್ಯದ ಹಾಸ್ಯ ಕಲಾವಿದ ಗಿಲ್ಲಿ ನಟ ಬಿಗ್ ಬಾಸ್ ಕನ್ನಡ ಸೀಸನ್ 12ರ ವೀನ್ನರ್ ಆಗಿ ಹೊರಹೊಮ್ಮಿದ್ದಾರೆ. ತುಳುನಾಡಿನ ವ್ಲಾಗರ್ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ಗಿಲ್ಲಿ ನಟನಿಗೆ ಬಿಗ್ ಬಾಸ್ ಪ್ರಶಸ್ತಿ ಜೊತೆಗೆ 50 ಲಕ್ಷ ರೂ. ಬಹುಮಾನ, ಸಾಯಿ ಗೋಲ್ಡ್ ನಿಂದ 20 ಲಕ್ಷ ರೂ. ಹಾಗೂ ಮಾರುತಿ ವಿಕ್ಟೋರಿಸ್ ಕಾರು ಅಲ್ಲದೇ ಕಾರ್ಯಕ್ರಮ ನಿರೂಪಣೆ ಮಾಡುವ ನಟ ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ವೈಯಕ್ತಿಕವಾಗಿ 10 ಲಕ್ಷ ರೂ. ಬಹುಮಾನ ಘೋಷಿಸಿದರು.
ಭಾರೀ ವಿವಾದ ಹಾಗೂ ಚರ್ಚೆಗೆ ಕಾರಣವಾಗಿದ್ದ ಕನ್ನಡ ಪರ ಸಂಘಟನೆ ಕಾರ್ಯಕರ್ತೆ ಹಾಗೂ ನಟಿ ಅಶ್ವಿನಿ ಗೌಡ ಮೂರನೇ ಸ್ಥಾನಕ್ಕೆ ಕುಸಿದರು. ಕಾವ್ಯಾ ನಾಲ್ಕನೇ ಸ್ಥಾನ ಪಡೆದರು.



