1961ರಿಂದ ದೇಶದಲ್ಲಿ ಜಾರಿಯಲ್ಲಿದ್ದ ಹಳೆಯ ತೆರಿಗೆ ಪದ್ಧತಿ ರದ್ದುಗೊಳಿಸಲಾಗಿದ್ದು, 2026 ಏಪ್ರಿಲ್ 1ರಿಂದ ನೂತನ ತೆರಿಗೆ ಪದ್ಧತಿ ಜಾರಿಗೆ ಬರಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಲೋಕಸಭೆಯಲ್ಲಿ ಭಾನುವಾರ ಮಂಡಿಸಿದ 2026-27ನೇ ಸಾಲಿನ ಬಜೆಟ್ ನಲ್ಲಿ ಕಳೆದ ಏಪ್ರಿಲ್ ನಲ್ಲಿ ಮಂಡಿಸಿದ ನೂತನ ನೇರ ತೆರಿಗೆ ಪದ್ಧತಿ 2026 ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದರು.
ಈ ಹಿಂದೆ ಹಿಂದೆ ಇದ್ದ ತೆರಿಗೆ ಅರ್ಜಿ ಸಲ್ಲಿಕೆಯಲ್ಲಿದ್ದ ಕಠಿಣವಾದುದ್ದನ್ನು ತೆಗೆದು ಹಾಕಲಾಗಿದ್ದು, ತೆರಿಗೆ ಅರ್ಜಿ ಸಲ್ಲಿಕೆಯ ಅರ್ಜಿಯನ್ನು ಸರಳೀಕರಣಗೊಳಿಸಲಾಗಿದೆ. ಇದರಿಂದ ತೆರಿಗೆದಾರರಿಗೆ ಇದ್ದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಅವರು ಹೇಳಿದರು.
ತೆರಿಗೆ ಪಾವತಿಸಲು ಜುಲೈ 31 ಕೊನೆಯ ದಿನವಾಗಿದ್ದು, ತೆರಿಗೆ ಪಾವತಿ ಬಾಕಿ ಉಳಿಸಿಕೊಂಡರೆ ಶೇ.೧೦೦ರಷ್ಟು ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಪಡಿಸುವ ನಿಯಮ ಜಾರಿಗೆ ಬರಲಿದೆ ಎಂದು ಅವರು ಘೋಷಿಸಿದರು
ಸಣ್ಣ ತೆರಿಗೆ ಪಾವತಿದಾರರಿಗೆ ಸಣ್ಣ ಪ್ರಮಾಣದಲ್ಲಿ ದಂಡ ವಿಧಿಸಲಾಗುವುದು. ವಿದೇಶಿ ಪ್ರವಾಸಿಗರಿಗೆ ತೆರಿಗೆ ಹೊರೆ ಇರುವುದಿಲ್ಲ. ಮೋಟಾರು ವಾಹನ ಅಪಘಾತದಲ್ಲಿ ಮೃತಪಟ್ಟವರರು ಪಡೆಯುವ ವಿಮಾ ಹಣದಲ್ಲಿ ಕಡಿತ ಮಾಡಲಾಗುತ್ತಿದ್ದ ತೆರಿಗೆಯನ್ನು ರದ್ದುಗೊಳಿಸಲಾಗಿದೆ.



