Wednesday, May 13, 2026
Google search engine
HomeUncategorizedಸತತ 3ನೇ ದಿನವೂ ಬೆಳ್ಳಿ, ಚಿನ್ನ ದರ ಕುಸಿತ!

ಸತತ 3ನೇ ದಿನವೂ ಬೆಳ್ಳಿ, ಚಿನ್ನ ದರ ಕುಸಿತ!

ಸತತ ಮೂರನೇ ದಿನವೂ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಪಾತಾಳ ಕುಸಿತ ಕಂಡಿದೆ. ಇದರಿಂದ ಗ್ರಾಹಕರು ಸಂತಸಗೊಂಡಿದ್ದಾರೆ.

ಭಾನುವಾರವೂ ಎಂಸಿಎಕ್ಸ್ ವಾಹಿವಾಟು ನಡೆದಿದ್ದು, 2026ರ ಬಜೆಟ್ ಘೋಷಣೆ ಬೆನ್ನಲ್ಲೇ ಚಿನ್ನದ ಪರ ಶೇ.9ರಷ್ಟು ಹಾಗೂ ಬೆಳ್ಳಿ ದರ ಶೆ.19ರಷ್ಟು ಕುಸಿತ ದಾಖಲಿಸಿದೆ.

ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,38,600 ರೂ.ಗೆ ಕುಸಿದರೂ ಮಧ್ಯಾಹ್ನದ ವೇಳೆ ಅಲ್ಪ ಚೇತರಿಕೆ ಕಂಡು 1,43,205 ರೂ. ತಲುಪಿತು.

22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,27,050 ರೂ.ಗೆ ಲಭ್ಯವಿದೆ. ಈ ದರಗಳು ಜಿಎಸ್ಟಿ ಮತ್ತು ಮೇಕಿಂಗ್ ಶುಲ್ಕಗಳನ್ನು ಒಳಗೊಂಡಿಲ್ಲ. ಸ್ಪಾಟ್ ಮಾರುಕಟ್ಟೆಯಲ್ಲಿ ಬೆಳ್ಳಿ ಕೂಡ ಪ್ರತಿ ಕೆಜಿಗೆ ಸುಮಾರು 2,65,600 ರೂ.ಗೆ ಇಳಿದಿದೆ. ಇದನ್ನೂ ಓದಿ: ಪ್ರತಿ ಔನ್ಸ್‌ ಚಿನ್ನ ದಾಖಲೆಯ 5,000 ಡಾಲರ್‌ ಗಡಿ ದಾಟಿದ್ದು ಹೇಗೆ? – ಟ್ರಂಪ್‌ ಕೊಡುಗೆ ಏನು?

ಕಳೆದ ವಾರ 4 ಲಕ್ಷ ರೂ. ಗಡಿ ತಲುಪಿದ್ದ ಬೆಳ್ಳಿ ಬೆಲೆ ಶೇ.19ರಷ್ಟು ಕುಸಿತ ಕಂಡಿದೆ. ಶುಕ್ರವಾರ ಶೇ.35 ರಷ್ಟು ಇಳಿಕೆ ಕಂಡಿದ್ದ 1980ರ ನಂತರ ಮೊದಲ ಬಾರಿಗೆ ಒಂದೇ ದಿನದಲ್ಲಿ ದಾಖಲೆಯ 1 ಲಕ್ಷ ರೂ.ನಷ್ಟು ಇಳಿಕೆ ಕಂಡಿತ್ತು. ಭಾನುವಾರವೂ ಬೆಳ್ಳಿ ದರ ಶೇ.19ರಷ್ಟು ಕುಸಿತ ಕಂಡಿದ್ದು, 3.12 ಸಾವಿರ ರೂ. ತಲುಪಿದೆ.

ಯಾವ ನಗರದಲ್ಲಿ ಎಷ್ಟು ದರ

ಬೆಂಗಳೂರಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,27,050 ರೂ. ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,38,600 ರೂ. ಇದೆ. ಜೈಪುರದಲ್ಲಿ 22 ಕ್ಯಾ. 1,26,950 ರೂ. ಮತ್ತು 24 ಕ್ಯಾ. 1,38,250 ರೂ. ಇದೆ. ಅಹಮದಾಬಾದ್‌ನಲ್ಲಿ 22 ಕ್ಯಾ. 1,26,850 ರೂ. ಮತ್ತು 24 ಕ್ಯಾ. 1,38,200 ರೂ. ಇದೆ. ಪುಣೆಯಲ್ಲಿ 22 ಕ್ಯಾ. 1,27,050 ರೂ. ಮತ್ತು 24 ಕ್ಯಾ. 1,38,600 ರೂ. ಆಗಿದೆ.

ಮುಂಬೈನಲ್ಲಿ 1,27,050 (22 ಕ್ಯಾ.), 1,38,600 ರೂ. (24ಕ್ಯಾ.) ಇದೆ. ಹೈದರಾಬಾದ್ 1,27,050 ರೂ. (22 ಕ್ಯಾ.) ಹಾಗೂ 1,38,600 ರೂ. (24ಕ್ಯಾ.)ಗೆ ಇಳಿದಿದೆ. ಚೆನ್ನೈನಲ್ಲಿ 1,27,050 ರೂ. (22 ಕ್ಯಾ.) ಹಾಗೂ 1,38,600 ರೂ. (24ಕ್ಯಾ.) ಇದೆ. ಕೋಲ್ಕತ್ತಾದಲ್ಲಿ 1,27,050 ರೂ. (22 ಕ್ಯಾ.) ಮತ್ತು 1,38,600 ರೂ. (24ಕ್ಯಾ.) ಗೆ ಇಳಿಕೆ ಕಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments