ಸಂವಿಧಾನದ ನಿಯಮಗಳನ್ನು ಅನುಸರಿಸದೇ ಇದ್ದರೆ ಭಾರತದಿಂದ ಹೊರಗೆ ಹೋಗಿ ಎಂದು ವಾಟ್ಸಪ್ ಹೊಸ ನಿಯಮಗಳ ಕುರಿತು ಸುಪ್ರೀಂಕೋರ್ಟ್ ಮೆಟಾಗೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ನೀವು ಜಾರಿಗೆ ತರಲು ಹೊರಟಿರುವ ಖಾಸಗಿ ನಿಯಮದಿಂದ ಭಾರತದ ಜೊತೆ ಆಟವಾಡುವಂತಿದೆ. ನಮ್ಮ ದೇಶದ ಒಂದೇ ಒಂದು ಅಂಕಿ-ಅಂಶ ಹೊರಹೋಗಲು ನಾವು ಬಿಡುವುದಿಲ್ಲ. ನಮ್ಮ ಕಾನೂನಿಗೆ ನೀವು ಬದ್ಧರಾಗದೇ ಇದ್ದರೆ ದೇಶದಿಂದ ಹೊರಹೋಗಿ ಎಂದು ಖಡಕ್ ಸೂಚನೆ ನೀಡಿದೆ.



