Saturday, June 27, 2026
Google search engine
Homeದೇಶಸ್ಪೀಕರ್‌ ನಂತರ ಚುನಾವಣಾ ಆಯೋಗದ ಮೇಲೆ ವಿಪಕ್ಷ ಕಣ್ಣು: ಜ್ಞಾನೇಶ್‌ ವಜಾಗೆ ೧೯೩ ಸಂಸದರು ಸಹಿ

ಸ್ಪೀಕರ್‌ ನಂತರ ಚುನಾವಣಾ ಆಯೋಗದ ಮೇಲೆ ವಿಪಕ್ಷ ಕಣ್ಣು: ಜ್ಞಾನೇಶ್‌ ವಜಾಗೆ ೧೯೩ ಸಂಸದರು ಸಹಿ

ನವದೆಹಲಿ: ಆಡಳಿತಾರೂಢ ಬಿಜೆಪಿಗೆ ಸಹಕಾರ ನೀಡುತ್ತಿರುವ ಜ್ಞಾನೇಶ್‌ ಕುಮಾರ್‌ ಅವರನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಇಂಡಿಯಾ ಮೈತ್ರಿಕೂಟದ 193 ಸಂಸದರು ಸಹಿ ಹಾಕಿದ್ದಾರೆ.

ಲೋಕಸಭೆಯ 130 ಹಾಗೂ ರಾಜ್ಯಸಭೆಯ 63 ಸದಸ್ಯರು ಜ್ಞಾನೇಶ್‌ ಕುಮಾರ್‌ ಅವರನ್ನು ಚುನಾವಣಾ ಆಯೋಗದ ಪ್ರಮುಖ ಸ್ಥಾನದಿಂದ ತೆಗೆದುಹಾಕಬೇಕು ಎಂದು ಎರಡು ಸೆಟ್‌ ಗಳ ನೋಟಿಸ್‌ ಅನ್ನು ಶುಕ್ರವಾರ ಸಂಸತ್‌ ಗೆ ನೀಡಲಾಗಿದೆ.

ಗುರುವಾರ ಎಲ್ಲಾ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಜ್ಞಾನೇಶ್‌ ಕುಮಾರ್‌ ಅವರನ್ನು ಹುದ್ದೆಯಿಂದ ತೆರವುಗೊಳಿಸುವಂತೆ ನೋಟಿಸ್‌ ಗೆ ಸಹಿ ಹಾಕಲು ಉತ್ಸಾಹ ತೋರಿದ್ದಾರೆ. ಎಲ್ಲರಿಗೂ ಜ್ಞಾನೇಶ್‌ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂಬುದು ಸ್ಪಷ್ಟ ಅರಿವಿದೆ ಎಂದು ಪ್ರತಿಪಕ್ಷದ ಸಂಸದರೊಬ್ಬರು ಹೇಳಿದ್ದಾರೆ.

ಸ್ಪೀಕರ್‌ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷ ಇದೀಗ ಚುನಾವಣಾ ಆಯೋಗದ ಮುಖ್ಯಸ್ಥರ ವಜಾಗೆ ಪಟ್ಟು ಹಿಡಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments