Friday, May 15, 2026
Google search engine
Homeದೇಶ75,000ಕ್ಕಿಂತ ಕಡಿಮೆ ಅಂಕಕ್ಕೆ ಕುಸಿದ ಷೇರು ಮಾರುಕಟ್ಟೆ: ಒಂದೇ ವಾರದಲ್ಲಿ 19 ಲಕ್ಷ ಕೋಟಿ ರೂ....

75,000ಕ್ಕಿಂತ ಕಡಿಮೆ ಅಂಕಕ್ಕೆ ಕುಸಿದ ಷೇರು ಮಾರುಕಟ್ಟೆ: ಒಂದೇ ವಾರದಲ್ಲಿ 19 ಲಕ್ಷ ಕೋಟಿ ರೂ. ನಷ್ಟ

ಮಧ್ಯಪ್ರಾಚ್ಯ ಬಿಕ್ಕಟ್ಟು ಬಂಡವಾಳ ಹೂಡಿಕೆದಾರರಿಗೆ ದೊಡ್ಡ ಹೊಡೆತ ನೀಡಿದ್ದು, ಒಂದೇ ವಾರದಲ್ಲಿ 19 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ಕಳೆದುಕೊಂಡಿದ್ದಾರೆ.

ಇರಾನ್-‌ ಅಮೆರಿಕ ಮತ್ತು ಇಸ್ರೇಲ್‌ ನಡುವಣ ಯುದ್ಧದಿಂದ ಮಧ್ಯಪ್ರಾಚ್ಯದಲ್ಲಿ ಕಳೆದ ಎರಡು ವಾರಗಳಿಂದ ಯುದ್ಧದಿಂದ ಅಪಾರ ನಷ್ಟವುಂಟಾಗುತ್ತಿದ್ದು, ಭಾರತೀಯ ಷೇರು ಮಾರುಕಟ್ಟೆ 75,000ಕ್ಕಿಂತ ಕಡಿಮೆ ಅಂಕಕ್ಕೆ ಕುಸಿತ ಕಂಡಿದೆ.

ಒಂದು ಕಡೆ ಷೇರು ಮಾರುಕಟ್ಟೆ ಕುಸಿತ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ಹೂಡಿಕೆದಾರರು ಭಾರೀ ನಷ್ಟಕ್ಕೆ ಒಳಗಾಗಿದ್ದು, ಪ್ರತಿದಿನ 9.8 ಲಕ್ಷ ಕೋಟಿಯಂತೆ ಸುಮಾರು 19 ಲಕ್ಷ ಕೋಟಿಯಷ್ಟು ನಷ್ಟ ಅನುಭವಿಸಿದ್ದಾರೆ.

ಶುಕ್ರವಾರ ಕೂಡ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 1441 ಅಂಕಗಳಷ್ಟು ಕುಸಿತ ಕಂಡಿದೆ. ಇದರಿಂದ ಷೇರು ಮಾರುಕಟ್ಟೆ ಅಂಕ 75,000 ಅಂಕಕ್ಕಿಂತ ಕಡಿಮೆಗೆ ಕುಸಿತ ಕಂಡಿದೆ. ಟಾಟಾ ಸ್ಟೀಲ್‌, ಟುರ್ಬೊ, ಎಸ್‌ ಬಿಐ, ಭಾರತ್‌ ಎಲೆಕ್ಟ್ರಾನಿಕ್ಸ್‌ ಮತ್ತು ಮಾರುತಿ ಸೇರಿದಂತೆ ಹಲವು ಕಂಪನಿಗಳು ಭಾರೀ ನಷ್ಟಕ್ಕೆ ಒಳಗಾಗಿವೆ. ಇದೀಗ ಈ ಸಾಲಿಗೆ ಹಿಂದೂಸ್ತಾನ್‌ ಲಿವರ್‌, ಭಾರ್ತಿ ಏರ್‌ ಟೆಲ್‌ ಮುಂತಾದ ದೈತ್ಯ ಕಂಪನಿಗಳು ಕೂಡ ನಷ್ಟ ಅನುಭವಿಸುವಂತಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಹರ್ಮುಜ್‌ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳನ್ನು ತಡೆಹಿಡಿಯಲಾಗಿದೆ. ಇದರಿಂದ ಆಮದು ಮತ್ತು ರಫ್ತು ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದ್ದು, ಕಳೆದ ವಾರ 78,918 ಇದ್ದ 75,000 ಅಂಕಕ್ಕಿಂತ ಕಡಿಮೆಗೆ ಇಳಿದಿದೆ.

ಮಾರುಕಟ್ಟೆ ಮೌಲ್ಯ 449.35 ಲಕ್ಷ ಕೋಟಿ ರೂ. ಎಂದು ಹೇಳಲಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ವಾರದಲ್ಲಿ 100 ಲಕ್ಷ ಕೋಟಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಅಂತಿಮವಾಗಿ ಶುಕ್ರವಾರ ಸಂಜೆ ವೇಳೆಗೆ ಸೆನ್ಸೆಕ್ಸ್‌ 74,596 ಅಂಕಗಳಿಗೆ ಕೊನೆಗೊಂಡಿದೆ. ನಿಷ್ಟೀ 23,170ಕ್ಕೆ ಅಂತ್ಯ ಕಂಡಿದೆ. ಒಟ್ಟಾರೆ ಒಂದು ವಾರದಲ್ಲಿ ೫೦೦ಕ್ಕೂ ಹೆಚ್ಚು ಕಂಪನಿಗಳ ಷೇರು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments