Friday, July 10, 2026
Google search engine
Homeವಿದೇಶ4000 ಕಿ.ಮೀ. ದೂರದ ಹಿಂದೂ ಮಹಾಸಾಗರದ ಮೇಲೆ ಇರಾನ್ ಖಂಡಾಂತರ ಕ್ಷಿಪಣಿ ದಾಳಿ

4000 ಕಿ.ಮೀ. ದೂರದ ಹಿಂದೂ ಮಹಾಸಾಗರದ ಮೇಲೆ ಇರಾನ್ ಖಂಡಾಂತರ ಕ್ಷಿಪಣಿ ದಾಳಿ

ಹಿಂದೂ ಮಹಾಸಾಗರದ ಡಿಯಾಗೋ ಗಾರ್ಸಿಯಾದಲ್ಲಿರುವ ಅಮೆರಿಕ-ಯುಕೆ ನೆಲೆಯ ಮೇಲೆ ಇರಾನ್ ಎರಡು ಮಧ್ಯಮ ಶ್ರೇಣಿಯ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ. ಈ ಮೂಲಕ ಇರಾನ್ ಯುದ್ಧದ ತೀವ್ರತೆ ಹೆಚ್ಚಿಸಿದೆ.

ಹರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಲು ಅಮೆರಿಕ 3 ಯುದ್ಧ ನೌಕೆ ಹಾಗೂ 2500 ನೌಕಾಪಡೆಗಳನ್ನು ಕಳುಹಿಸಿದ ಬೆನ್ನಲ್ಲೇ ಇರಾನ್ ಹಿಂದೂ ಮಹಾಸಾಗಾರದಲ್ಲಿರುವ ಅಮೆರಿಕ- ಬ್ರಿಟನ್ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ.

ಇರಾನ್ ದಾಳಿ ನಡೆಸಿದ ಎರಡು ಕ್ಷಿಪಣಿಗಳ ಪೈಕಿ ಒಂದು ವಿಫಲವಾದರೆ, ಮತ್ತೊಂದನ್ನು ಯಶಸ್ವಿಯಾಗಿ ತಡೆಯಲಾಗಿದೆ. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಇರಾನ್ ಉಡಾಯಿಸಿದ ಎರಡು ಖಂಡಾಂತರ ಕ್ಷಿಪಣಿಗಳು ವಿಫಲವಾದರೂ ಎಚ್ಚರಿಕೆಯ ಗಂಟೆಯಾಗಿದೆ. ಏಕೆಂದರೆ ಸಾರ್ವಜನಿಕರ ಸಮ್ಮುಖದಲ್ಲಿ ಈ ಕ್ಷಿಪಣಿಯ ಸಾಮರ್ಥ್ಯ 2000 ಕಿ.ಮೀ. ಎಂದು ಹೇಳಲಾಗಿತ್ತು. ಆದರೆ ವಾಸ್ತವವಾಗಿ 4000 ಕಿ.ಮೀ. ದೂರದ ಗುರಿಯತ್ತ ಚಿಮ್ಮಿದೆ. ಇದರಿಂದ ಇರಾನ್ ಬಳಿಯ ಅಸ್ತ್ರಗಳ ಸಾಮರ್ಥ್ಯದ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟುಹಾಕಿವೆ.

ಡಿಯಾಗೊ ಗಾರ್ಸಿಯಾ ವಾಯುನೆಲೆ ಇರಾನ್ ನಿಂದ 4000 ಕಿ.ಮೀ. ದೂರದಲ್ಲಿದೆ. ಮೂಲಗಳ ಪ್ರಕಾರ ಇರಾನ್ ಹಿಂದೂ ಮಹಾಸಾಗರದಲ್ಲಿರುವ ಈ ನೆಲೆಯ ಮೇಲೆ ದಾಳಿ ಮಾಡಲು ಕ್ಷಿಪಣಿಯ ಸಾಮರ್ಥ್ಯವನ್ನು ಪರೀಕ್ಷಿಸಲು ಮಾತ್ರ ಎಂದು ಹೇಳಲಾಗಿದೆ.

ಈಗಾಗಲೇ ವಿಶ್ವದ ಅತೀ ದೊಡ್ಡ ತೈಲ ಘಟಕವನ್ನು ಉಡಾಯಿಸಿರುವ ಇರಾನ್ ಖಂಡಾಂತರ ಕ್ಷಿಪಣಿಗಳ ಬಳಕೆ ಮಾಡಿದರೆ ಇನ್ನಷ್ಟು ಅಪಾಯಕ್ಕೆ ಎದುರಿಸಬೇಕಾಗುತ್ತದೆ ಎಂದು ಅರಬ್ ರಾಷ್ಟ್ರಗಳು ಚಿಂತೆಗೀಡಾಗಿವೆ.

ಡಿಯಾಗೊ ಗಾರ್ಸಿಯಾ ಸಣ್ಣ ವಾಯುನೆಲೆಯಲ್ಲ. ಅಮೆರಿಕದ ಅತ್ಯಂತ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹ ಹೊಂದಿರುವ ನೆಲೆಯಾಗಿದೆ. ಅಲ್ಲದೇ ಸರಕು ಸಾಗಾಟ ಮತ್ತು ಏಷ್ಯಾ ಭಾಗದಲ್ಲಿನ ಅತಂಕ ನಿವಾರಣೆಗೆ ಅಮೆರಿಕದಲ್ಲಿರುವ ನೆಲೆಗೆ ಸರಿಸಮಾನವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments