Thursday, May 28, 2026
Google search engine
Homeದೇಶಇರಾನ್ ನಿಂದ 1777 ಭಾರತೀಯರು ಸ್ವದೇಶಕ್ಕೆ ವಾಪಸ್: ಕೇಂದ್ರ

ಇರಾನ್ ನಿಂದ 1777 ಭಾರತೀಯರು ಸ್ವದೇಶಕ್ಕೆ ವಾಪಸ್: ಕೇಂದ್ರ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಇರಾನ್ ನಲ್ಲಿ ಸಿಲುಕಿದ್ದ 1777 ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ರಣಭೀರ್ ಜೈಸ್ವಾಲ್ ಈ ಮಾಹಿತಿ ನೀಡಿದ್ದು, ಇರಾನ್ ನಲ್ಲಿ ಸಿಲುಕಿದ್ದ 1777 ಭಾರತೀಯರನ್ನು ಅರ್ಮೆನಿಯಾ, ಅಜರ್ ಬೈಜಾನ್ ಮೂಲಕ ಸ್ವದೇಶಕ್ಕೆ ಕರೆಸಿಕೊಳ್ಳಲಾಗಿದೆ ಎಂದರು.

ಇರಾನ್- ಅಮೆರಿಕ ಮತ್ತುಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಎರಡನೇ ತಿಂಗಳಿಗೆ ಕಾಲಿಟ್ಟಿದ್ದು, ಭಾರತೀಯರು ಸುರಕ್ಷಿತವಾಗಿ ತೆರಳಲು ಇರಾನ್ ರಾಯಭಾರ ಕಚೇರಿ ಸುರಕ್ಷಿತ ಮಾರ್ಗ ಕಲ್ಪಿಸಿಕೊಟ್ಟಿದೆ ಎಂದರು.

1777 ಭಾರತೀಯರನ್ನು ಅರ್ಮೆನಿಯಾ ಮತ್ತು ಅಜರ್ ಬೈಜಾನ್ ತಲುಪಿದ್ದು, ಇದೀಗ ಸ್ವದೇಶಕ್ಕೆ ಮರಳುತ್ತಿದ್ದಾರೆ. ಅವರನ್ನು ಸುರಕ್ಷಿತವಾಗಿ ತವರುಗಳಿಗೆ ಕಳುಹಿಸಿಕೊಡಲಾಗುವುದು ಎಂದು ಅವರು ಹೇಳಿದರು.

345 ಮೀನುಗಾರರು ಹಾಗೂ 895 ವಿದ್ಯಾರ್ಥಿಗಳನ್ನು ಈಗಾಗಲೇ ಇರಾನ್ ನಿಂದ ಸ್ವದೇಶಕ್ಕೆ ಕರೆಸಿಕೊಳ್ಳಲಾಗಿದೆ. ಭಾರತೀಯರ ಸುರಕ್ಷತೆಗೆ ನೆರವಾದ ಅರ್ಮೆನಿಯಾ ಹಾಗೂ ಅಜರ್ ಬೈಜಾನ್ ಸರ್ಕಾರಗಳಿಗೆ ಅವರು ಧನ್ಯವಾದ ಅರ್ಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments