Monday, May 25, 2026
Google search engine
Homeಮನರಂಜನೆಕೃಷ್ಣ ರುಕ್ಕು ಹತ್ತಿರವಾಗ್ತಾರಾ? ಕುತೂಹಲ ಘಟ್ಟದಲ್ಲಿ ಧಾರವಾಹಿ

ಕೃಷ್ಣ ರುಕ್ಕು ಹತ್ತಿರವಾಗ್ತಾರಾ? ಕುತೂಹಲ ಘಟ್ಟದಲ್ಲಿ ಧಾರವಾಹಿ

ಕರ್ನಾಟಕದ ಜನ ಮನ ಗೆದ್ದ ಸುಂದರ ಕಥೆ ಕೃಷ್ಣ ರುಕ್ಕು. ಝೀ ಕನ್ನಡದಲ್ಲಿ ಸಂಜೆ 6:30 ಕ್ಕೆ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಕಡಿಮೆ ಸಮಯದಲ್ಲೇ ಜಾಸ್ತಿ ಪ್ರೀತಿ ಗಳಿಸಿದೆ.

ಅಕ್ಷಯ್ ನಾಯಕ್ ಹಾಗೂ ಮೌನ ಗುಡ್ಡೆಮನೆ ಇಲ್ಲಿ ಕೃಷ್ಣ ರುಕ್ಕು ಪಾತ್ರಗಳಿಗೆ ಜೀವ ತುಂಬುತ್ತಿದ್ದು, ಎಸ್. ನಾರಾಯಣ್, ಸುಚಿತ್ರಾ ಸೇರಿದಂತೆ ಹಲವು ಹಿರಿಯ ತಾರಾಗಣದ ಬಲವಿದೆ.

ಕೃಷ್ಣ ರುಕ್ಕು ಕುಟುಂಬದಲ್ಲೀಗ ಸಂಭ್ರಮದ ಸಮಯ, ಕಲ್ಯಾಣಿ ಹಾಗೂ ವಿನಯ್ ಅವರ ಕಲ್ಯಾಣೋತ್ಸವ. ಕೃಷ್ಣ ರುಕ್ಕು ಜೊತೆ ಸೇರಿ ಈ ಮದುವೇನ ಯಶಸ್ವಿ ಗೊಳಿಸೋ ಹಾದಿಯಲ್ಲಿದ್ದಾರೆ. ಈ ಹಾದಿಯಲ್ಲಿ ಕೃಷ್ಣ ರುಕ್ಕು ಹತ್ತಿರವಾಗ್ತಾರಾ? ಕಾದು ನೋಡಬೇಕಾಗಿದೆ.

ಈ ವಿಶೇಷ ಸಂಚಿಕೆಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಚಂದನ ವಿನದ ನಗು ಮೊಗದ ಚೆಲುವೆ ಅನು ಪ್ರಭಾಕರ್. ಇವರು ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ಮುಂದುವರೆಯಲಿದ್ದಾರಾ?

ಈ ಕಲ್ಯಾಣೋತ್ಸವದ ನಡುವೆ ಹಲವು ವಿಘ್ನಗಳು ಎದುರಾಗುತ್ತಿದೆ. ಮೊದಲಿಗೆ ಕೃಷ್ಣನೇ ಮದುವೆ ಮನೆಯಿಂದ ಗಡಿಪಾರಾಗಿದ್ದಾನೆ. ಗಡಿ ದಾಟಿ ಬರೋದು ಹೇಗೆ, ಸಮಸ್ಯೆಗಳನ್ನೆಲ್ಲಾ ಕೃಷ್ಣ ರುಕ್ಕು ಜೊತೆಯಾಗಿ ಹೇಗೆ ಸರಿ ಪಡಿಸ್ತಾರೆ ಎಂಬುದೇ ಕುತೂಹಲದ ವಿಷಯ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments