Wednesday, June 3, 2026
Google search engine
Homeದೇಶದೆಹಲಿ ರೆಸ್ಟೋರೆಂಟ್‌ ನಲ್ಲಿ ಅಗ್ನಿ ದುರಂತ: ವಿದೇಶಿಯರು ಸೇರಿ 21 ಮಂದಿ ದುರ್ಮರಣ

ದೆಹಲಿ ರೆಸ್ಟೋರೆಂಟ್‌ ನಲ್ಲಿ ಅಗ್ನಿ ದುರಂತ: ವಿದೇಶಿಯರು ಸೇರಿ 21 ಮಂದಿ ದುರ್ಮರಣ

ದಕ್ಷಿಣ ದೆಹಲಿಯ ಮಾಲ್ವಿಯಾ ನಗರದ ರೆಸ್ಟೋರೆಂಟ್ ನಲ್ಲಿ ಸಂಭವಿಸಿದ ​​ಭೀಕರ ಅಗ್ನಿ ದುರಂತದಲ್ಲಿ ವಿದೇಶೀಯರು ಸೇರಿದಂತೆ 21 ಮಂದಿ ಅಸುನೀಗಿದ್ದಾರೆ.

ಬುಧವಾರ ಇಂದು ಬೆಳಗ್ಗೆ 8.51ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಇಡೀ ಹೋಟೆಲ್‌ ಗೆ ಆವರಿಸಿಕೊಂಡಿದೆ. ದುರಂತದಲ್ಲಿ 47 ಮಂದಿಯನ್ನು ರಕ್ಷಿಸಲಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಅಗ್ನಿ ಅನಾಹುತದ ಬಗ್ಗೆ ನಮಗೆ ಕರೆ ಬಂಧ ತಕ್ಷಣವೇ ಅಗ್ನಿಶಾಮಕ ದಳಗಳು ಘಟನಾ ಸ್ಥಳಕ್ಕೆ ತೆರಳಿ ರಕ್ಷಣೆ ನಡೆಸಿದ್ದರಿಂದ ಸಾವಿನ ಸಂಖ್ಯೆ ಕಡಿಮೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ರೆಸ್ಟೋರೆಂಟ್‌ನ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಲವರು ಸಿಲುಕಿಕೊಂಡಿದ್ದರು. ಅಗ್ನಿಶಾಮಕ ದಳ ಈಗಾಗಲೇ ಹಲವರನ್ನು ರಕ್ಷಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಬೆಂಕಿಯಿಂದ ರಕ್ಷಿಸಿಕೊಳ್ಳಲು ಹಲವಾರು ಮಂದಿ ರೆಸ್ಟೋರೆಂಟ್‌ ನಿಂದ ಹೊರಗೆ ಜಿಗಿದಿದ್ದಾರೆ. ರೆಸ್ಟೋರೆಂಟ್‌ ನಲ್ಲಿ 25 ಕೊಠಡಿಗಳು ಇದ್ದು, 40ಕ್ಕೂ ಅಧಿಕ ಮಂದಿ ಪ್ರವಾಸಿಗರು ನೆಲೆಸಿದ್ದರು. ದುರಂತ ಸಂಭವಿಸಿದಾಗ ಬಹುತೇಕ ಮಂದಿ ಮಲಗಿದ್ದರು. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಅಡುಗೆ ಮಾಡಲು ಬೆಳಿಗ್ಗೆ ಸ್ವಿಚ್‌ ಹಾಕಿದ ಕೂಡಲೇ ಬೆಂಕಿ ಕಾಣಿಸಿಕೊಂಡಿದೆ ಎಂದು ಹೋಟೆಲ್‌ ನ ಪ್ರಮುಖ ಬಾಣಸಿಗ ಹೇಳಿದ್ದಾರೆ.

ಸ್ಥಳೀಯ ಬಿಜೆಪಿ ಶಾಸಕ ಸತೀಶ್ ಉಪಾಧ್ಯಾಯ ಅವರು ಪ್ರತಿಕ್ರಿಯಿಸಿ, “ಇದುವರೆಗೆ 21 ಸಾವು ಸಂಭವಿಸಿದೆ. 47 ಜನರನ್ನು ರಕ್ಷಿಸಲಾಗಿದೆ. ಬೆಂಕಿ ಅನಾಹುತ ಹೇಗೆ ಸಂಭವಿಸಿತು ಎಂಬುದು ತನಿಖೆಯ ವಿಷಯ. ಇದು ತುಂಬಾ ದುಃಖಕರ ಘಟನೆ. ಸರ್ಕಾರಿ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ರಕ್ಷಣಾ ತಂಡಗಳು ತಕ್ಷಣವೇ ಪ್ರತಿಕ್ರಿಯಿಸದೇ ಇರುತ್ತಿದ್ದರೆ ಇನ್ನಷ್ಟು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ ಇಲ್ಲಿಗೆ ಬಂದು ಉಳಿದುಕೊಂಡಿದ್ದ ಬಾಂಗ್ಲಾದೇಶ ಮತ್ತು ಸಾರ್ಕ್ ದೇಶಗಳ ಜನರೂ ಇದ್ದರು” ಎಂದು ಮಾಹಿತಿ ನೀಡಿದರು.

ಮಾಳವೀಯ ನಗರ ಅಗ್ನಿ ಅವಘಡದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಮೃತರ ಸಂಬಂಧಿಕರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments