Tuesday, June 30, 2026
Google search engine
Homeಕ್ರೀಡೆಯುರೋ ಕಪ್: ಉಕ್ರೇನ್ ಗೆಲುವಿನಲ್ಲಿ ಮಿಂಚಿದ ಯರೆಮುಚುಕ್!

ಯುರೋ ಕಪ್: ಉಕ್ರೇನ್ ಗೆಲುವಿನಲ್ಲಿ ಮಿಂಚಿದ ಯರೆಮುಚುಕ್!

ರೊಮನ್ ಯರೆಮುಚುಕ್ ಕೊನೆಯ ಕ್ಷಣದಲ್ಲಿ ಸಿಡಿಸಿದ ಗೋಲಿನ ನೆರವಿನಿಂದ ಉಕ್ರೇನ್ ತಂಡ ಯುರೋ ಕಪ್ 2024 ಪಂದ್ಯದಲ್ಲಿ 2-1 ಗೋಲುಗಳಿಂದ ಸ್ಪೊವಾಕಿಯಾ ತಂಡವನ್ನು ಬಗ್ಗುಬಡಿದಿದೆ.

ಶುಕ್ರವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಆರಂಭದ ಹಿನ್ನಡೆಯಿಂದ ಸೋಲಿನ ದವಡೆಯಲ್ಲಿದ್ದ ಉಕ್ರೇನ್ ತೀವ್ರ ಹೋರಾಟ ನಡೆಸಿ ಗೆಲುವು ಒಲಿಸಿಕೊಂಡಿದೆ.

ಉಕ್ರೇನ್ ಪರ ಮೈಕೊಲಾ ಶಾಪರೆಂಕೊ (54ನೇ ನಿಮಿಷ) ಮತ್ತು ರೊಮನ್ ಯರೆಮುಚುಕ್ (80ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರೆ, ಸ್ಲೊವಾಕಿಯಾ ಪರ ಇವಾನ್ ಶ್ಕೆರ್ನಾಜ್ (17ನೇ ನಿಮಿಷ) ಆರಂಭದಲ್ಲೇ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರೂ ವ್ಯರ್ಥವಾಯಿತು.

ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಉಕ್ರೇನ್ ಈ ಗೆಲುವಿನೊಂದಿಗೆ ಗುಂಪಿನಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದರೆ, ಸ್ಲೊವಾಕಿಯಾ ನಾಲ್ಕನೇ ಸ್ಥಾನ ಪಡೆಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments