Tuesday, July 21, 2026
Google search engine
Homeರಾಜ್ಯಸಿಕ್ಕಿಂನಲ್ಲಿ ಸುರಂಗ ಕುಸಿದು ಕನಿಷ್ಠ 10 ಮಂದಿ ಸಾವು

ಸಿಕ್ಕಿಂನಲ್ಲಿ ಸುರಂಗ ಕುಸಿದು ಕನಿಷ್ಠ 10 ಮಂದಿ ಸಾವು

ಸಿಕ್ಕಿಂನಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗ ಕುಸಿದು ಗ್ಯಾಸ್‌ ಸೋರಿಕೆ ಆದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿರುವ ಘಟನೆ ಮಂಗಳವಾರ ಸಂಭವಿಸಿದೆ.

ದಕ್ಷಿಣ ಸಿಕ್ಕಿಂನ ಸಮರ್‌ ದಂಗ್‌ ಸುರಂಗದಲ್ಲಿ ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದ್ದು, 12 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 18 ಮಂದಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಪಟೇಲ್‌ ಕನ್‌ ಸ್ಟ್ರಕ್ಷನ್‌ ಕಂಪನಿ ಟೀಸ್ಟಾ ಸ್ಟೇಜ್‌ ೪ ಹಂತದ ಹೈಡ್ರೋಲಿಕ್‌ ಪ್ರಾಜೆಕ್ಟ್‌ ನಲ್ಲಿ ನಿರತವಾಗಿತ್ತು ಎಂದು ತಿಳಿದು ಬಂದಿದೆ.
ಸುರಂಗ ಮಾರ್ಗದ ಒಳಗೆ ಭೂಕುಸಿತ ಸಂಭವಿಸಿದ್ದು, ಇನ್ನೂ ಹಲವಾರು ಮಂದಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments