ಖ್ಯಾತ ಪಾಪ್ ಗಾಯಕಿ ಉಷಾ ಉತ್ತುಪ್ ಅವರ ಪತಿ ಜಾನಿ ಚಾಕೊ ಕೋಲ್ಕತಾದಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ನಿವಾಸದಲ್ಲಿ ರಾತ್ರಿ ಟಿವಿ ನೋಡುತ್ತಿದ್ದಾಗ ಅಸ್ವಸ್ಥಗೊಂಡ ಅವರು ಹೃದಯಾಘಾತಕ್ಕೆ ಒಳಗಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಉಷಾ ಅವರ ಅವರ ಎರಡನೇ ಪತಿ ಆಗಿದ್ದ ಜಾನಿ ಜಾಕೊ ಟೀ ಎಸ್ಟೇಟ್ ಮಾಲೀಕರಾಗಿದ್ದರು. ಇಬ್ಬರು ಮೊದಲ ಬಾರಿ 70ರ ದಶಕದಲ್ಲಿ ಭೇಟಿ ಆಗಿದ್ದರು.
ಜಾನಿ ಚಾಕೊ ಮತ್ತು ಉಷಾ ಉತ್ತುಪ್ ಅವರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ. ಮಂಗಳವಾರ ಕೋಲ್ಕತಾದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.