Tuesday, June 23, 2026
Google search engine
Homeಅಪರಾಧಪ್ರಿಯಕರನ ಜೊತೆಗೂಡಿ ತಂಗಿ-ಅಪ್ಪ-ಅಮ್ಮನನ್ನೇ ಕೊಚ್ಚಿ ಕೊಂದ ಮಗಳು!

ಪ್ರಿಯಕರನ ಜೊತೆಗೂಡಿ ತಂಗಿ-ಅಪ್ಪ-ಅಮ್ಮನನ್ನೇ ಕೊಚ್ಚಿ ಕೊಂದ ಮಗಳು!

ಪ್ರಿಯಕರನೊಂದಿಗೆ ಸೇರಿ ತಂದೆ – ತಾಯಿ ಹಾಗೂ ಸಹೋದರಿಯನ್ನ ಮಚ್ಚಿನಿಂದ ಕೊಚ್ಚಿ ಮಗಳೇ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹೊರ ಭಾಗದ ಮಾಗಡಿ ರಸ್ತೆಯಲ್ಲಿರುವ ಸಿಗೇಹಳ್ಳಿಯಲ್ಲಿರುವ ಡಾಮಿನಿಕ್ ಲೇಔಟ್‌ನ ಸಾಯಿ ಗ್ರೀನ್ ಹೋಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ತಂದೆ ಸೋಮಸುಂದರ್ (52), ತಾಯಿ ಲಕ್ಷ್ಮಿ (48) ಮತ್ತು ಸುಪ್ರಿಯಾ (19) ಅವರನ್ನು ಕೊಲೆ ಮಾಡಿದ ಪ್ರಿಯಕರ ಕೆನತ್ (26) ಹಾಗೂ ಶ್ವೇತಾ (25) ಪರಾರಿಯಾಗಿದ್ದಾರೆ.

ಕೆನತ್ ಹಾಗೂ ಶ್ವೇತಾ ಎರಡು ತಿಂಗಳುಗಳಿಂದ ಡಾಮಿನಿಕ್ ಲೇಔಟ್‌ನ ಸಾಯಿ ಗ್ರೀನ್ ಹೋಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಇಬ್ಬರೂ ಒಟ್ಟಿಗೆ ವಾಸಿಸುತ್ತಿರುವುದಕ್ಕೆ ಶ್ವೇತಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಶನಿವಾರ ಸಂಜೆ ಮಗಳನ್ನು ಭೇಟಿಯಾಗಲು ಶ್ವೇತಾ ಪೋಷಕರು ಬಂದಿದ್ದರು. ಈ ವೇಳೆ ಸೋಮವಾರ ರಾತ್ರಿ 7:30ರ ಸುಮಾರಿಗೆ ಪೋಷಕರು ಹಾಗೂ ಶ್ವೇತಾ ನಡುವೆ ವಾಗ್ವಾದವಾಗಿದೆ.

ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಆರೋಪಿಗಳು ಮಾರಕಾಸ್ತ್ರಗಳಿಂದ ಹೊಡೆದು ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸೋಮಸುಂದರ್ ತಪ್ಪಿಸಿಕೊಂಡು ಹೊರಗೆ ಬಂದಿದ್ದಾರೆ. ಸ್ಥಳೀಯರನ್ನು ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಮೊನ್ನೆ ತಂದೆ-ತಾಯಿ ಮತ್ತು ತಂಗಿ ಹಳ್ಳಿಯಿಂದ ಬಂದಿದ್ದಾರೆ ಎಂದು ಅವರನ್ನು ಶ್ವೇತಾ ಮನೆಯೊಳಗೆ ಕರೆದೊಯ್ದಿದ್ದಳು. ಆಕೆಯ ತಂದೆ ಮನೆಯಲ್ಲಿ ಬ್ಯಾಗ್ ಮತ್ತು ಸಾಮಾನುಗಳನ್ನೆಲ್ಲ ಇಟ್ಟು ಮತ್ತೆ ವಾಪಸ್ ಹೊರಗಡೆ ಬಂದಿದ್ದರು. ಅದಾದ ಮೇಲೆ ಮತ್ತೆ ಹೋಗಿದ್ದರು.

ನಿನ್ನೆ ಸಂಜೆ ಅವರು ಹೊರಗಡೆ ಸುತ್ತಾಡಿ ಆಮೇಲೆ ಇಲ್ಲಿಗೆ ವಾಪಸ್ ಮನೆಗೆ ಬಂದ ಬಳಿಕ ಈ ರೀತಿಯ ಘಟನೆ ನಡೆದಿದೆ. ನನಗೆ ರಾತ್ರಿ 9 ಗಂಟೆಗೆ ಸುಮಾರಿಗೆ ಈ ರೀತಿ ಘಟನೆಯಾಗಿರುವುದು ಗೊತ್ತಾಗಿದೆ” ಎಂದು ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ವೀರ್ ಬಹದ್ದೂರ್ ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments