Sunday, June 28, 2026
Google search engine
Homeವಿದೇಶಮಧ್ಯಪ್ರಾಚ್ಯ ವಿನಾಶಕ್ಕೆ ಕ್ಷಣಗಣನೆ: ಇರಾನ್ ಮೇಲೆ ಇಂದೇ ದಾಳಿ?

ಮಧ್ಯಪ್ರಾಚ್ಯ ವಿನಾಶಕ್ಕೆ ಕ್ಷಣಗಣನೆ: ಇರಾನ್ ಮೇಲೆ ಇಂದೇ ದಾಳಿ?

ಟೆಹರಾನ್/ ವಾಷಿಂಗ್ಟನ್/ ಇಸ್ತಾಂಬುಲ್: ಅಮೆರಿಕ ನೀಡಿದ್ದ ಗಡುವು ಮುಗಿಯುವ ಮುನ್ನವೇ ಗುಡುಗಿದ ಅಮೆರಿಕ, ಇರಾನ್ ಮತ್ತು ಇಸ್ರೇಲ್ ದೇಶಗಳು ಭಾರೀ ಪ್ರಮಾಣದಲ್ಲಿ ದಾಳಿ ಪ್ರತಿದಾಳಿ ನಡೆಸಿವೆ. ಗಡುವು ಮುಗಿಯುತ್ತಿದ್ದಂತೆ ಭಾರೀ ಪ್ರಮಾಣದ ದಾಳಿಗೆ ಮೂರೂ ದೇಶಗಳು ಸಜ್ಜಾಗಿವೆ.

ಹರ್ಮುಜ್ ಜಲಸಂಧಿ ಮುಕ್ತಗೊಳಿಸುವುದು ಸೇರಿದಂತೆ 15 ಅಂಶಗಳ ಷರತ್ತು ವಿಧಿಸಿ ಅಮೆರಿಕ ನೀಡಿದ್ದ ಗಡುವು ಮಂಗಳವಾರ ರಾತ್ರಿ 8 ಗಂಟೆಗೆ ಅಂತ್ಯಗೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ 10 ಷರತ್ತು ವಿಧಿಸಿತ್ತು.

ಮಧ್ಯಪ್ರಾಚ್ಯ ಯುದ್ಧ ಆರಂಭವಾಗಿ 40ನೇ ದಿನಕ್ಕೆ ಕಾಲಿಡುತ್ತಿದೆ. ಇದುವರೆಗೆ ನಡೆದ ಯುದ್ಧದಲ್ಲಿ ಸಾಕಷ್ಟು ಹಾನಿಯಾಗಿದ್ದರೂ ಯುದ್ಧ ನಿಲ್ಲಿಸುವ ಬಗ್ಗೆ ಯಾವುದೇ ತಾರ್ಕಿಕ ಅಂತ್ಯಕ್ಕೆ ಬರಲು ವಿಫಲವಾಗಿವೆ. ಅಲ್ಲದೇ ಮೂರೂ ದೇಶಗಳು ತಮ್ಮ ಷರತ್ತಿಗೆ ಪಟ್ಟು ಹಿಡಿದಿದ್ದು, ಯಾವುದೇ ದೇಶ ಹಿಂದೆ ಸರಿಯುವ ಸೂಚನೆ ನೀಡಿಲ್ಲ.

ಅಮೆರಿಕ ಭೀಕರ ದಾಳಿಯ ಮುನ್ಸೂಚನೆ ನೀಡಿದರೆ, ಇರಾನ್ ಮಾನವ ಸರಪಳಿ ಮೂಲಕ ವಿರೋಧಿಸಲು ಜನರಿಗೆ ಕರೆ ನೀಡಿದೆ. ಇರಾನ್ ನಲ್ಲಿ ರೈಲು ಪ್ರಯಾಣ ಮಾಡಬೇಡಿ ಎಂದು ಇಸ್ರೇಲ್ ಮುನ್ನೆಚ್ಚರಿಕೆ ನೀಡಿದೆ.

ಈ ಎಲ್ಲಾ ಬೆಳವಣಿಗೆ ನಡುವೆ ಗಡುವು ಮುಗಿಯಲು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ನ ಖಾರ್ಗ್ ದ್ವೀಪ, ರೈಲು ನಿಲ್ದಾಣ ಹಾಗೂ ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿ ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಯಾಹ್ಯಾಬಾದ್ ರೈಲ್ವೆ ಸೇತುವೆ ಮೇಲೆ ನಡೆದ ಇಬ್ಬರು ಮೃತಪಟ್ಟಿದ್ದಾರೆ. ಇದೇ ವೇಳೆ ಇಸ್ರೇಲ್ ನ ಡ್ರೋಣ್ ಗಳನ್ನು ಇರಾನ್ ಹೊಡೆದುರುಳಿಸಿದೆ.

ಇದೇ ವೇಳೆ ಗುಡುವು ಮುಗಿಯುತ್ತಿದ್ದಂತೆ ಇರಾನ್ ಮೇಲೆ ಮಾರಕ ದಾಳಿ ನಡೆಸಲಿದ್ದೇವೆ. ಇರಾನ್ ಅನ್ನು ಒಂದೇ ರಾತ್ರಿಯಲ್ಲಿ ನಾವು ಧ್ವಂಸ ಮಾಡಬಲ್ಲೆವು. ಆ ದಿನ ನಾಳೆಯೇ ಆಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇರಾನ್ ಸರ್ವನಾಶ ಮಾಡಲು ನಮಗೆ 4 ಗಂಟೆ ಸಾಕು. ಅವರು ಇದೇ ರೀತಿ ಹಠ ಹಿಡಿದರೆ ನಮಗೆ ಬೇರೆ ದಾರಿ ಇಲ್ಲ. ನಾವು ಭೀಕರ ದಾಳಿ ಮಾಡುತ್ತೇವೆ ಎಂದು ಹೇಳಿರುವ ಟ್ರಂಪ್ ಇರಾನ್ ಮೇಲೆ ನಡೆಸಲಿರುವ ಸ್ಥಳಗಳ ಹಿಟ್ ಲಿಸ್ಟ್ ಬಿಡುಗಡೆ ಮಾಡಿದ್ದಾರೆ.

ಖಾರ್ಗ್ ದ್ವೀಪ, ಪ್ರಮುಖ ವಿದ್ಯುತ್ ಸ್ಥಾವರ, ಪರಮಾಣು ಕೇಂದ್ರ, ತಾಂತ್ರಿಕ ಮತ್ತು ಸಂಶೋಧನ ವಿವಿಗಳು, ಐಆರ್‌ಜಿಸಿ ಕಚೇರಿಗಳು, ಉಪ್ಪು ನೀರಿನ ಸಂಸ್ಕರಣಾ ಘಟಕಗಳು ಮತ್ತು ಸೇತುವೆಗಳ ಮೇಲೆ ದಾಳಿ ಮಾಡುವುದಾಗಿ ಅಮೆರಿಕ ಹಿಟ್ ಲಿಸ್ಟ್ ಬಿಡುಗಡೆ ಮಾಡಿದೆ.

ಇದೇ ವೇಳೆ ಇರಾನ್ ಕೂಡ ಇಸ್ರೇಲ್ ಮೇಲೆ ದಾಳಿ ಮುಂದುವರಿಸಿದೆ. ಇದರ ನಡುವೆ ಇಬ್ಬರು ಅಪರಿಚಿತ ವ್ಯಕ್ತಿಗಳು ಇಸ್ರೇಲ್ ರಾಜಧಾನಿ ಇಸ್ತಾಂಬುಲ್ ನಲ್ಲಿರುವ ರಾಯಭಾರ ಕಚೇರಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments