ಅನಾರೋಗ್ಯದಿಂದ ಬಳಲುತ್ತಿದ್ದ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ(80) ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಜಿಯಾವುರ್ ರೆಹಮಾನ್ ಅವರ ಪತ್ನಿ ಖಲೀದಾ ಜಿಯಾ ಯಕೃತ್ತು ಮತ್ತು ಮೂತ್ರಪಿಂಡದ ಸಮಸ್ಯೆಗಳು, ಮಧುಮೇಹ, ಸಂಧಿವಾತ ಮತ್ತು ಕಣ್ಣಿನ ಸಮಸ್ಯೆಗಳು ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಅವರು ದೀರ್ಘ ಸಮಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮುಂಜಾನೆ ವಿಧಿವಶರಾಗಿದ್ದಾರೆ.
ವರ್ಷದ ಆರಂಭದಲ್ಲಿ ನಾಲ್ಕು ತಿಂಗಳ ವೈದ್ಯಕೀಯ ಚಿಕಿತ್ಸೆಯ ನಂತರ ಖಾಲಿದಾ ಜಿಯಾ ಮೇ 6 ರಂದು ಲಂಡನ್ನಿಂದ ಮರಳಿದ್ದರು. ಅವರ ಹಿರಿಯ ಮಗ ಮತ್ತು ಬಿಎನ್ಪಿ ಅಧ್ಯಕ್ಷ ತಾರಿಕ್ ರೆಹಮಾನ್ 2008 ರಿಂದ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಅವರ ಕಿರಿಯ ಮಗ ಅರಾಫತ್ ರೆಹಮಾನ್ 2025 ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಾಂಗ್ಲಾದೇಶದಲ್ಲಿ 2024ರ ಆಗಸ್ಟ್ನಲ್ಲಿ ವಿದ್ಯಾರ್ಥಿಗಳ ನೇತೃತ್ವದ ಹಿಂಸಾತ್ಮಕ ಪ್ರತಿಭಟನೆ ನಡೆದು ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರ ಅಧಿಖಾರ ಕಲೆದುಕೊಂಡಿದೆ. ಬದಲಾಗುತ್ತಿರುವ ರಾಜಕೀಯದಲ್ಲಿ ಬಿಎನ್ಪಿ ಮುಂಚೂಣಿ ಪಕ್ಷ ವಾಗಿ ಹೊರಹೊಮ್ಮಿದೆ.
ಪ್ರಸ್ತುತ ಪದಚ್ಯುತಗೊಂಡು ದೇಶ ತೊರೆದು ಭಾರತದಲ್ಲಿ ನೆಲೆಸಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಖಾಲಿದ ಜಿಯಾ ರಾಜಕೀಯ ಬದ್ಧ ಶತ್ರುವಾಗಿದ್ದರು. ಜಿಯಾ ಅವರನ್ನು ಸೋಲಿಸಿ ಶೇಖ್ ಹಸೀನಾ ಪ್ರಧಾನಿ ಸ್ಥಾನ ಅಲಂಕರಿಸಿದ್ದರು.
ಖಲೀದಾ ಜಿಯಾ 15 ಆಗಸ್ಟ್ 1945ರಲ್ಲಿ ಹುಟ್ಟಿದ್ದರು. 1991 ರಿಂದ 1996 ರವರೆಗೆ ಮತ್ತು 2001 ರಿಂದ 2006 ರವರೆಗೆ ಬಾಂಗ್ಲಾದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಬೆನಜೀರ್ ಭುಟ್ಟೋ ನಂತರ ಎರಡನೇ ಮುಸ್ಲಿಂ ಮಹಿಳಾ ಪ್ರಧಾನಿ ಆಗಿದ್ದರು.



