ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಪುತ್ರ ರೈಹಾನ್ ವಾದ್ರಾ ಬಹುಕಾಲದ ಗೆಳತಿ ಅವಿವಾ ಬೇಗ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
25 ವರ್ಷದ ರೈಹಾನ್ ವಾದ್ರಾ 7 ವರ್ಷಗಳಿಂದ ಪ್ರೀತಿಸುತ್ತಿದ್ದ ಅವಿವಾ ಬೇಗ್ ಅವರಿಗೆ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದು, ಆಕೆ ಸಮ್ಮತಿ ಸೂಚಿಸಿದ್ದಾರೆ.
ಪ್ರಿಯಾಂಕಾ ಗಾಂಧಿ, ರಾಬರ್ಟ್ ವಾದ್ರಾ ಮದುವೆಯಾಗಿ 28 ವರ್ಷ ಕಳೆದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಬ್ರಮ ಮನೆ ಮಾಡಿದೆ. ಅವಿವಾ ಬೇಗ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದ್ದು, ಎರಡೂ ಕುಟುಂಬಗಳ ನಡುವೆ ಒಳ್ಳೆಯ ಬಾಂಧವ್ಯವಿದೆ ಎನ್ನಲಾಗಿದೆ.
ರೈಹಾನ್ ವಾದ್ರಾ ವಿಷ್ಯುವಲ್ ಆರ್ಟಿಸ್ಟ್ (ದೃಶ್ಯ ಕಲಾವಿದ) ಆಗಿ ವೃತ್ತಿಯಲ್ಲಿ ತೊಡಗಿದ್ದು, ಹತ್ತು ವರ್ಷ ಹುಡುಗನಾಗಿದ್ದಾಲೇ ಮರಾದಲ್ಲಿ ಅವರು ಫೋಟೋಗಳನ್ನು ಸೆರೆ ಹಿಡಿಯುತ್ತಿದ್ದರು.
ಮುಂಬೈನ ಕೊಲಾಬಾದಲ್ಲಿರುವ ‘ಎಪಿಆರ್‌ಇ ಆರ್ಟ್ ಹೌಸ್’ ಎಂಬ ಕಲಾ ಗ್ಯಾಲರಿಯಲ್ಲಿ 2021ರಲ್ಲಿ ನವದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ‘ಡಾರ್ಕ್ ಪರ್ಸೆಪ್ಶನ್’ ಹೆಸರಿನ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದ್ದರು.
ಕ್ರಿಕೆಟಿಗ ಆಗಬೇಕೆಂದು ಕನಸು ಕಂಡಿದ್ದ ರೈಹಾನ್ 2017ರಲ್ಲಿ ಶಾಲಾ ಕ್ರಿಕೆಟ್ ಪಂದ್ಯದಲ್ಲಿ ಕಣ್ಣಿಗೆ ಗಾಯವಾದ ನಂತರ ತಮ್ಮ ವೃತ್ತಿಯ ನಿರ್ಧಾರವನ್ನು ಬದಲಿಸಿಕೊಂಡರು. ಕಣ್ಣಿಗೆ ಗಾಯವಾದ ಮೇಲೆ ಅನುಭವಿಸಿದ ನೋವನ್ನು ದೃಶ್ಯದ ಮೂಲಕ ಪ್ರದರ್ಶನ ಮಾಡಿದ್ದರು.
“ನನ್ನ ಕಣ್ಣಿಗೆ ಗಾಯ ಆದ್ಮೇಲೆ ನಾನು ಕಪ್ಪು, ಬಿಳಿಪು ಫೋಟೋಗಳನ್ನು ತೆಗೆಯಲು ಶುರು ಮಾಡಿದೆ. ಒಂದು ವಿಷಯವನ್ನು ಒಬ್ಬರು ಹೇಗೆ ಗ್ರಹಿಸುತ್ತಾರೆ, ಬೆಳಕನ್ನು ಹೇಗೆ ಹುಡುಕುತ್ತಾರೆ, ಕತ್ತಲೆಯನ್ನು ಹೇಗೆ ಬಳಸಿಕೊಳ್ತಾರೆ ಅನ್ನೋದನ್ನು ಈ ದೃಶ್ಯ ಪ್ರದರ್ಶನ ತಿಳಿಸುವುದು ಎಂದು ಹೇಳಿದ್ದರು.
ರೈಹಾನ್ ಅಜ್ಜ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಫೋಟೋಗಳನ್ನು ತುಂಬ ಇಷ್ಟಪಡುತ್ತಿದ್ದರು. ರೈಹಾನ್ ತಾತನ ಫೋಟೋಗ್ರಫಿ ಕೆಲಸಗಳನ್ನುಅಧ್ಯಯನ ಮಾಡಿದ್ದಾರೆ. ಅವಿವಾ ಬೇಗ್ ಕೂಡ ಫೋಟೋಗ್ರಾಫರ್, ಪ್ರೊಡ್ಯೂಸರ್ ಆಗಿದ್ದಾರೆ. ಇಬ್ಬರ ಆಸಕ್ತಿ ಹಾಗೂ ವೃತ್ತಿ ಒಂದೇ ಆಗಿದ್ದು, ಒಂದೇ ದಾರಿಯ ಪಯಾಣಿಗರಾಗಿದ್ದಾರೆ.
ಫೋಟೊಗ್ರಾಫರ್ ಆಗಿರುವ ಅವಿವಾ ಬೇಗ್ ಅಟೆಲಿಯಾ 11 ಸಂಸ್ಥೆಯ ಸಂಸ್ಥಾಪಕಿ ಆಗಿದ್ದಾರೆ. ಫೋಟೊಗ್ರಾಫಿಕ್ ಸ್ಟುಡಿಯೋ ಹೊಂದಿರುವ ಪ್ರೊಡಾಕ್ಷನ್ ಕಂಪನಿ ಇದಾಗಿದ್ದು, ಬ್ರಾಂಡ್, ಏಜೆನ್ಸಿನ್ ಮುಂತಾದ ವಿಷಯಗಳ ಮೇಲೆ ದೇಶಾದ್ಯಂತ ಕೆಲಸ ಮಾಡುತ್ತಿದೆ.
ಯು ಕೆನಾಟ್ ಮಿಸ್ ದಿಸ್ ಹೆಸರಿನಡಿ 2023ರಲ್ಲಿ ಗ್ಯಾಲರಿ ಪ್ರದರ್ಶನ ಏರ್ಪಡಿಸಿದ್ದರು. ಜಿಂದಾಲ್ ವಿಶ್ವವಿದ್ಯಾಲಯದಲ್ಲಿ ಮೀಡಿಯಾ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಪದವಿ ಪಡೆದಿದ್ದು, ಪ್ಲಸ್ ರಿಯಾಮ್ ಸಂಸ್ಥೆಯಲ್ಲಿ ಫ್ರೀಲಾನ್ಸ್ ಪ್ರಡ್ಯೂಸರ್ ಆಗಿದ್ದಾರೆ. ಜರ್ನಲ್ ಐ –ಪಾರ್ಲಿಮೆಂಟ್ ಸಂಸ್ಥೆಯಲ್ಲಿ ಎಡಿಟರ್ ಇನ್ ಚೀಫ್ ಆಗಿ ಕೆಲಸ ಮಾಡಿದ್ದಾರೆ. ಕ್ರಿಯೇಟಿವ್ ಇಮೇಜ್ ಸಾಪ್ತಾಹಿಕದಲ್ಲಿ ತರಬೇತಿ ಉದ್ಯೋಗಿ ಆಗಿ ಕೆಲಸ ಮಾಡಿದ್ದಾರೆ.



