Tuesday, May 26, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ 1ನೇ ತರಗತಿಯ ಶುಲ್ಕ 7.5 ಲಕ್ಷ ರೂ.: ರಸೀದಿ ಫೋಟೊ ವೈರಲ್!

ಬೆಂಗಳೂರಿನಲ್ಲಿ 1ನೇ ತರಗತಿಯ ಶುಲ್ಕ 7.5 ಲಕ್ಷ ರೂ.: ರಸೀದಿ ಫೋಟೊ ವೈರಲ್!

ಬೆಂಗಳೂರಿನ ಶಾಲೆಯೊಂದರಲ್ಲಿ 1ನೇ ತರಗತಿ ವಿದ್ಯಾರ್ಥಿಯ ವಾರ್ಷಿಕ ಶುಲ್ಕ 7.5 ಲಕ್ಷ ರೂ. ಆಗಿದ್ದು, ಶುಲ್ಕದ ರಸೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೆಂಗಳೂರಿನ ಖಾಸಗಿ ಶಾಲೆಯ ವಾರ್ಷಿಕ ಶುಲ್ಕದ ರಸೀದಿಯ ಫೋಟೊವನ್ನು ಪೋಷಕರೊಬ್ಬರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದನೇ ತರಗತಿಗೆ 7.5 ಲಕ್ಷ ರೂ. ಆದರೆ ಹಂತ ಹಂತವಾಗಿ ಹೆಚ್ಚಳವಾಗಿ 10ನೇ ತರಗತಿಗೆ 11ರಿಂದ 12 ಲಕ್ಷ ರೂ. ಆಗಲಿದೆ.

ವಾರ್ಷಿಕ ಶುಲ್ಕದ ಲೆಕ್ಕ ಇದಾದರೆ, ಮಕ್ಕಳ ಪುಸ್ತಕ, ಸಾರಿಗೆ ವೆಚ್ಚ, ಸಮವಸ್ತ್ರ, ಇತರೆ ಕಲಾ ಚಟುವಟಿಕೆ ಸೇರಿದಂತೆ ಒಂದನೇ ತರಗತಿಯ ವಿದ್ಯಾರ್ಥಿಯ ಶುಲ್ಕ 8 ಲಕ್ಷ ರೂ. ದಾಟಲಿದೆ.

ಶಿಕ್ಷಣ ಅನ್ನೋದು ಮುಕ್ತ ಮಾರುಕಟ್ಟೆ ಆಗಿದೆ. ಶುಲ್ಕ ನಿಗದಿ ಮಾಡಲು ಮಾನದಂಡಗಳೇ ಇಲ್ಲದಂತಾಗಿದೆ. ಇದು ಬೆಂಗಳೂರಿನ ಅತ್ಯುತ್ತಮ ಶಾಲೆ ಆಗಿದೆ. ಆದರೆ ಶುಲ್ಕಕ್ಕೆ ಮಿತಿಯೇ ಇಲ್ಲ. ಐಟಿಯಲ್ಲಿ ಉದ್ಯೋಗಿಗಳು ವಾರ್ಷಿಕ 50 ಲಕ್ಷ ರೂ. ಸಂಪಾದಿಸುತ್ತಿದ್ದಾರೆ. ಅವರಿಗೆ ಇದು ಸಮಸ್ಯೆ ಆಗುವುದಿಲ್ಲ. ಆದರೆ ವಿಪರೀತ ಶುಲ್ಕದಿಂದ ಸಾಮಾನ್ಯ ಜನರಿಗೆ ಉತ್ತಮ ಶಿಕ್ಷಣ ದುಸ್ತರವಾಗಿದೆ ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments