ಬೆಂಗಳೂರು: ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಚಲಾಯಿಸಿದರೆ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಲು ನಗರ ಪೊಲೀಸರು ಮುಂದಾಗಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಏಕೆ ಇಷ್ಟು ಕಠಿಣ ಕ್ರಮ ಎಂದರೆ, ಕೆಲವರು ಸಂಚಾರ ನಿಯಮ ಉಲ್ಲಂಘನೆ ಮರೆಮಾಚಲು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಕೆಲ ಪುಂಡರು ವಾಹನಗಳಿಗೆ ನಂಬರ್ ಪ್ಲೇಟ್ ಹಾಕದೆ, ನಂಬರ್ ಪ್ಲೇಟ್ ವಿಕಾರಗೊಳಿಸಿ ಓಡಾಡುತ್ತಿದ್ದಾರೆ. ಅಂತವರನ್ನು ಮಟ್ಟ ಹಾಕಲು ಪೊಲೀಸರು ಕಠಿಣ ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ.
ಪಶ್ಚಿಮ ವಿಭಾಗ ಒಂದರಲ್ಲೇ 40ಕ್ಕೂ ಹೆಚ್ಚು ವಾಹನ ಸವಾರರ ವಿರುದ್ಧ ವಂಚನೆ ಕೇಸ್ ದಾಖಲಿಸಿಸಲಾಗಿದೆ. ನಗರದ ವಿವಿಧ ವಿಭಾಗದಲ್ಲಿ ಒಟ್ಟು ನೂರಕ್ಕು ಅಧಿಕ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಬಿಸಿಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಒಂದು ರಾತ್ರಿಯಲ್ಲಿ ನಗರದಾದ್ಯಂತ ಸುಮಾರು 1ಸಾ ವಿರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಕೆಲವರು ಸಮರ್ಪಕದ ಕಾರಣ ನೀಡಿ ವಾಹನ ಬಿಡಿಸಿಕೊಂಡು ಹೋದರೆ, ಉಳಿದವರು ಸಮರ್ಪಕವಾದ ಕಾರಣ ನೀಡದೆ ಹೋಗಿದ್ದರಿಂದ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಾದವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗುತ್ತದೆ. ವಾಹನ ಸವಾರರು ಕೋರ್ಟ್ ಮುಖಾಂತರವೇ ತಮ್ಮ ತಮ್ಮ ವಾಹನಗಳನ್ನು ಬಿಡಿಸಿಕೊಳ್ಳುವಂತೆ ಪೊಲೀಸರು ಮಾಡುತ್ತಿದ್ದಾರೆ.



