Friday, May 15, 2026
Google search engine
Homeಮನರಂಜನೆ`ಮಹಾಭಾರತ’ದ ಕೃಷ್ಣನ ಪಾತ್ರಧಾರಿಯ ದಾಂಪತ್ಯದಲ್ಲಿ ಬಿರುಕು: ಪತ್ನಿಯಿಂದ ಗಂಭೀರ ಆರೋಪ

`ಮಹಾಭಾರತ’ದ ಕೃಷ್ಣನ ಪಾತ್ರಧಾರಿಯ ದಾಂಪತ್ಯದಲ್ಲಿ ಬಿರುಕು: ಪತ್ನಿಯಿಂದ ಗಂಭೀರ ಆರೋಪ

ಮಹಾಭಾರತ ಧಾರವಾಹಿಯಲ್ಲಿ ಕೃಷ್ಣನ ಪಾತ್ರ ನಿಭಾಯಿಸಿ ಜನಪ್ರಿಯರಾಗಿದ್ದ ನಿತೀಶ್ ಭಾರಧ್ವಾಜ್ ದಾಂಪತ್ಯದಲ್ಲಿ ಬಿರುಕು ಏರ್ಪಟ್ಟಿದ್ದು, ಅಪ್ಪನ ಬಳಿ ಹೋಗಲು ಮಕ್ಕಳೇ ಹಿಂದೇಟು ಹಾಕುತ್ತಿದ್ದಾರೆ ಎಂದು ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.

ನಿತೀಶ್ ಭಾರಧ್ವಾಜ್ ಮತ್ತು ಪತ್ನಿ ಸ್ಮಿತಾ ಗೇಟ್ ಇಬ್ಬರೂ ಇದೀಗ ವಿಚ್ಚೇಧನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಮಕ್ಕಳ ಸ್ವಾಧೀನಕ್ಕಾಗಿ ಹೋರಾಟ ನಡೆಸಿದ್ದಾರೆ.

ನಿತೀಶ್ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ತಂದೆ ಬಗ್ಗೆ ಹೇಳಿದರೆ ಮಕ್ಕಳು ನಾಚಿಕೆಪಟ್ಟುಕೊಳ್ಳುತ್ತಾರೆ ಎಂದು ಭೋಪಾಲ್‌ನ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಪತ್ನಿ ದೂರಿದ್ದಾರೆ.

ಪತ್ನಿ ಆರೋಪಗಳನ್ನು ನಿತೀಶ್ ನಿರಾಕರಿಸಿದ್ದು, ಪತ್ನಿ ಪ್ರತಿ ಬಾರಿಯೂ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಮಕ್ಕಳ ಜೀವನ ಹಾಳಾಗಬಾರದು ಎಂದು ಅವರನ್ನು ನನ್ನ ಸುಪರ್ದಿಗೆ ನೀಡಲು ಕೋರ್ಟ್ ಮೊರೆ ಹೋಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ನನ್ನ ಮಕ್ಕಳು ನಿಮ್ಮನ್ನು ತಂದೆಯಾಗಿ ಪಡೆದಿರುವುದಕ್ಕೆ ನಾಚಿಕೆಪಡುತ್ತಿದ್ದಾರೆ ಎಂದು ಸ್ಮಿತಾ ಆರೋಪಕ್ಕೆ ಪತ್ನಿ ಜೀವನಾಂಶದ ಜೊತೆ ಮಕ್ಕಳ ಪಾಲನೆ ಮೊತ್ತ ಪಡೆಯಲು ಈ ಆರೋಪ ಮಾಡುತ್ತಿದ್ದಾರೆ ಎಂದು ನಿತೀಶ್ ಪ್ರತ್ಯಾರೋಪ ಮಾಡಿದ್ದಾರೆ.

ನಾನು ನನ್ನ ಮಕ್ಕಳಿಗಾಗಿ ಹೋರಾಡುತ್ತಿದ್ದೇನೆ. ನನ್ನ ಮಕ್ಕಳು ಸ್ಮಿತಾಳಂತೆ ಇರಬೇಕೆಂದು ನಾನು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸ್ಮಿತಾ ಮತ್ತು ನಿತೀಶ್ 2009 ರಲ್ಲಿ ವಿವಾಹವಾಗಿದ್ದು, 2019ರಲ್ಲಿ ಇಬ್ಬರೂ ಬೇರ್ಪಟ್ಟರು. ಅಂದಿನಿಂದ, ಇಬ್ಬರ ನಡುವಿನ ವಿಚ್ಛೇದನ ನಿರ್ಧಾರ ಬಾಕಿ ಇದ್ದು, ಇದೀಗ ವಿಚ್ಚೇದನಕ್ಕಾಗಿ ಕಾನೂನು ಮೊರೆ ಹೋಗಿದ್ದಾರೆ. ಇಬ್ಬರೂ ಮಕ್ಕಳ ಪಾಲನೆಗಾಗಿ ಹೋರಾಟ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments