Thursday, May 14, 2026
Google search engine
HomeಮನರಂಜನೆBigg boss ಬಿಗ್ ಬಾಸ್ ಶೋ ನಿರೂಪಕರಾಗಿ ನಟ ಸುದೀಪ್ ಮುಂದುವರಿಕೆ: ಅಧಿಕೃತ ಘೋಷಣೆ

Bigg boss ಬಿಗ್ ಬಾಸ್ ಶೋ ನಿರೂಪಕರಾಗಿ ನಟ ಸುದೀಪ್ ಮುಂದುವರಿಕೆ: ಅಧಿಕೃತ ಘೋಷಣೆ

ನಟ ಕಿಚ್ಚ ಸುದೀಪ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನಿರೂಪಕರಾಗಿ ಮುಂದುವರಿಯಲಕಿದ್ದಾರೆ ಎಂದು ಕನ್ನಡ ಕಲರ್ಸ್ ವಾಹಿನಿ ಅಧಿಕೃತ ಘೋಷಣೆ ಮಾಡಿದೆ.

ಕಿಚ್ಚ ಸುದೀಪ್ ಸತತ 11 ಆವೃತ್ತಿಗಳಲ್ಲಿ ಬಿಗ್ ಬಾಸ್ ನಡೆಸಿಕೊಟ್ಟಿದ್ದರು. ಈ ಮೂಲಕ ಬಿಗ್ ಬಾಸ್ ಇತಿಹಾಸದಲ್ಲೇ ಅತೀ ಹೆಚ್ಚು ಆವೃತ್ತಿವರೆಗೆ ನಿರೂಪಣೆ ಮಾಡಿದ ಮೊದಲಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
ಆದರೆ 11ನೇ ಆವೃತ್ತಿ ನಂತರ ಕಿಚ್ಚ ಸುದೀಪ್ ಬಿಗ್ ಬಾಸ್ ನಿಂದ ಹೊರಬರುವುದಾಗಿ ಘಘೋಷಿಸಿದ್ದರು. ಆದರೆ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಉಪಸ್ಥಿತಿಯಲ್ಲೇ ಕಲರ್ಸ್ ಕನ್ನಡ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.

ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕೂಡ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲೇ ಮುಂದುವರಿಯಲಿದೆ. ‘ಕಲರ್ಸ್ ಕನ್ನಡ’ ವಾಹಿನಿ ಹೇಳಿದೆ.

ಕಿಚ್ಚ ಸುದೀಪ್ ಅವರನ್ನು ವೀಕ್ಷಕರು ಸಖತ್ ಇಷ್ಟಪಡುತ್ತಾರೆ. ಅವರನ್ನು ನೋಡುವ ಸಲುವಾಗಿಯೇ ವಾರಾಂತ್ಯದಲ್ಲಿ ಅಭಿಮಾನಿಗಳು ಟಿವಿ ಎದುರು ಕೂರುತ್ತಾರೆ. ಸುದೀಪ್ ಇಲ್ಲದೇ ಇದ್ದರೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ನೋಡುವುದಿಲ್ಲ ಎಂದು ಕೂಡ ಅನೇಕ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದರು. ಆದರೆ ಈಗ ಸುದೀಪ್ ಅವರೇ ನಿರೂಪಣೆ ಮಾಡಲು ಒಪ್ಪಿಕೊಂಡಿರುವುದು ಎಲ್ಲರಿಗೂ ಖುಷಿ ತಂದಿದೆ.

ಬಿಗ್ ಬಾಸ್ ಶೋ ನಡೆಸಿಕೊಡುವುದು ಸುಲಭವಲ್ಲ. ಅದಕ್ಕೆ ಸಾಕಷ್ಟು ಬದ್ಧತೆ ಬೇಕಾಗುತ್ತದೆ. ಸುದೀಪ್ ಅವರು ಸತತವಾಗಿ 11 ಸೀಸನ್ಗಳನ್ನು ನಡೆಸಿಕೊಟ್ಟಿದ್ದಾರೆ. ಇದು ದಾಖಲೆ ಕೂಡ ಹೌದು. ಆ ದಾಖಲೆಯ ಜರ್ನಿಯನ್ನು ಅವರು ಮುಂದುವರಿಸಲಿದ್ದಾರೆ. 12ನೇ ಸೀಸನ್ ನಡೆಸಿಕೊಡಲು ಅವರು ಒಪ್ಪಿಕೊಂಡಿದ್ದರಿಂದ ವೀಕ್ಷಕರ ಉತ್ಸಾಹ ಹೆಚ್ಚಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments